ಜಿಲ್ಲೆ

ಕೆಎಸ್​ಆರ್​​ಟಿಸಿ ಬಸ್​ನಲ್ಲೇ ಪ್ರಾಣ ಬಿಟ್ಟ ಮಹಿಳೆ; ಹೃದಯಾಘಾತಕ್ಕೀಡಾಗಿ ಸತ್ತಿರುವ ಶಂಕೆ..

ಬೆಂಗಳೂರು: ಮಹಿಳೆಯೊಬ್ಬರು ಕೆಎಸ್​ಆರ್​ಟಿಸಿ ಬಸ್​ನಲ್ಲೇ ಪ್ರಾಣ ಬಿಟ್ಟಂಥ ಪ್ರಕರಣವೊಂದು ನಡೆದಿದೆ. ಈಕೆ ಹೃದಯಾಘಾತಕ್ಕೀಡಾಗಿ ಸಾವಿಗೀಡಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್​ಆರ್​​ಟಿಸಿ ಬಸ್​ನಲ್ಲಿ ಈ ಮಹಿಳೆ ಪ್ರಯಾಣಿಸುತ್ತಿದ್ದು, ಇದೇ ಇವರ ಜೀವನದ ಕೊನೆಯ ಪ್ರಯಾಣವಾಗಿದೆ. ಬೆಂಗಳೂರಿಗೆ ಸಮೀಪದ ಕೆ.ಆರ್. ಪುರ ಬಳಿ ಮಹಿಳೆ ಅಸ್ವಸ್ಥಗೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಸಾವಿಗೀಡಾಗಿದ್ದಾರೆ.

ಕೆಎ 42 ಎಫ್​ 2265 ಬಸ್​ನಲ್ಲಿ ಈ ಪ್ರಕರಣ ನಡೆದಿದೆ. ಮಹಿಳೆ ಸಾವಿಗೀಡಾದ್ದು ಗಮನಕ್ಕೆ ಬರುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕೆ.ಆರ್.ಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದು, ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.