ಜಿಲ್ಲೆ

ಬೈಕಿಗೆ ಅಡ್ಡಬಂದ ಕಾಡು ಹಂದಿ, ಸವಾರ ಆಸ್ಪತ್ರೆಗೆ

ಸೌಮ್ಯ ಆರ್

ಸುಳ್ಯ: ತಾಲೂಕಿನ ಐವರ್ನಾಡು ಗ್ರಾಮದ ಬೇಂಗಮಲೆಯಲ್ಲಿ ಕಾಡುಹಂದಿಯೊಂದು ಹಠಾತ್ ರಸ್ತೆ ದಾಟುವಾಗ ಬೈಕಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ. ಐವರ್ನಾಡಿನ ಕೋಡ್ತಿಲು ಚಂದ್ರಕಾಂತ ಎಂಬುವರು ಸುಳ್ಯ ಕಡೆಯಿಂದ ಬೇಂಗಮಲೆ ಮಾರ್ಗವಾಗಿ ಐವರ್ನಾಡು ಕಡೆಗೆ ಹೋಗುವಾಗ ಬೇಂಗಮಲೆಯಲ್ಲಿ ಕಾಡುಹಂದಿ ಬೈಕಿಗೆ ಡಿಕ್ಕಿ ಹೊಡೆಯಿತು. ಬೈಕ್ ಮಗುಚಿ ಬಿದ್ದು, ಸವಾರನ ತಲೆಗೆ ಗಾಯವಾಯಿತು. ಇದನ್ನು ಕಂಡ ಹಿಂದಿನಿಂದ ಹೋಗುತ್ತಿರುವ ವಾಹನದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.