ಕಾರ್ಕಳ: ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ ನಿಟ್ಟೆ ವತಿಯಿಂದ ಸಮಾಜ ಕಲ್ಯಾಣಾರ್ಥ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಶ್ರೀ ಕಾಳಿಕಾಂಬಾ ಮಹಿಳಾ ಸೇವಾ ಸಮಿತಿ ಹಾಗೂ ವಿಶ್ವಕರ್ಮ ಯುವವೇದಿಕೆ ನಿಟ್ಟೆ ಸಹಭಾಗಿತ್ವದಲ್ಲಿ ನಿಟ್ಟೆ ಪ್ರಾಥಮಿಕ ಶಾಲೆಯ ನಿಟ್ಟೆ ರುಕ್ಮಿಣಿ ಅಡ್ಯಂತಾಯ ಸ್ಮಾರಕ ಸಭಾಭವನದಲ್ಲಿ ಬೋಳ ಮಂಜುನಾಥ ಪುರೋಹಿತರ ಪೌರೋಹಿತ್ಯದಲ್ಲಿ ಇತ್ತೀಚೆಗೆ ನಡೆಯಿತು.
ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯರು ಮಾತನಾಡಿ, ನಿಟ್ಟೆ ಸಮಿತಿ ವಿಶ್ವಕರ್ಮ ಪೂಜೆ ಕೇವಲ ವಿಶ್ವಕರ್ಮರಿಗೆ ಸೀಮಿತವಾಗಿರಿಸದೆ, ಸಾರ್ವಜನಿಕರನ್ನು ಒಗ್ಗೂಡಿಸಿ ಪೂಜೆ ಮಾಡಿ ತೋರಿಸಿದ್ದಾರೆ, ಇದು ಎಲ್ಲರಿಗೂ ಮಾದರಿ. ಹೊಸತನವನ್ನು ತರುವಲ್ಲಿ ಮುಂಚೂಣಿಯಲ್ಲಿರುವ ಸಂಘ ಎಂದರೆ ನಿಟ್ಟೆ ಸಂಘ ಎಂದರು.
ಸಮಿತಿ ಅಧ್ಯಕ್ಷ ಹರ್ಷವರ್ಧನ್ ಆಚಾರ್ಯ ನಿಟ್ಟೆ ಅಧ್ಯಕ್ಷತೆ ವಹಿಸಿದ್ದು, ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಮಂಗಳೂರು ವಿಭಾಗದ ಮಹಿಳಾ ಅಧ್ಯಕ್ಷೆ ಆಶಾ ಉಮೇಶ್ ಗುರೂಜಿ, ವಿಶ್ವಕರ್ಮ ಒಕ್ಕೂಟದ ಕೋಶಾಧಿಕಾರಿ ಜನಾರ್ದನ ಎಸ್.ಆಚಾರ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಆಚಾರ್ಯ, ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರಾದ ರಾಮಚಂದ್ರ ಆಚಾರ್ಯ, ರವಿ ಆಚಾರ್ಯ, ಸುರೇಶ್ ಆಚಾರ್ಯ ನಿಟ್ಟೆ, ಹರೀಶ್ ಆಚಾರ್ಯ ನೆಲ್ಲಿಕಾರು, ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ಆಚಾರ್ಯ ನಿಟ್ಟೆ, ಉಪಾಧ್ಯಕ್ಷ ಈಶ್ವರ್ ಬಡಿಗೇರ, ಕಾಳಿಕಾಂಬಾ ಮಹಿಳಾ ಸಮಿತಿ ಅಧ್ಯಕ್ಷೆ ವತ್ಸಲಾ ಉಮೇಶ ಆಚಾರ್ಯ, ಗೌರವಾಧ್ಯಕ್ಷೆ ವೀಣಾ ದಿವಾಕರ ಆಚಾರ್ಯ, ಉಪಾಧ್ಯಕ್ಷೆ ಉದಯ ಸುಧಾಕರ ಆಚಾರ್ಯ, ಹಾಗೂ ಕಾರ್ಯದರ್ಶಿ ಆಶಾ ಜಯಾನಂದ ಆಚಾರ್ಯ, ವಿಶ್ವಕರ್ಮ ಯುವವೇದಿಕೆ ಅಧ್ಯಕ್ಷ ಪ್ರದೀಪ್ ಆಚಾರ್ಯ ಪರಪ್ಪಾಡಿ, ಉಪಾಧ್ಯಕ್ಷ ಸುಧೀರ್ ಆಚಾರ್ಯ ಕಲ್ಯಾ ಹಾಗೂ ವಿವಿಧ ವಿಶ್ವಕರ್ಮ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಮಿತಿ ಕೋಶಾಧಿಕಾರಿ ಜಯಾನಂದ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಧರ ಆಚಾರ್ಯ ಕೆಮ್ಮಣ್ಣು ವಾರ್ಷಿಕ ವರದಿ ವಾಚಿಸಿದರು. ಪ್ರಸಾದ್ ಆಚಾರ್ಯ, ಶ್ರೇಯಾ, ಸೃಜಾ ನಿರೂಪಿಸಿದರು. ದಿವಾಕರ ಆಚಾರ್ಯ ಕೆಮ್ಮಣ್ಣು ವಂದಿಸಿದರು. ಯುವ ಕಲಾವಿದ ಪ್ರದೀಪ್ ಆಚಾರ್ಯ ಕೆಮ್ಮಣ್ಣು ನೇತೃತ್ವದ ಮೆಲೋಡಿ ಮ್ಯೂಸಿಕಲ್ ತಂಡದಿಂದ ಸಂಗೀತಾ ರಸಮಂಜರಿ ಹಾಗೂ ಸಮಾಜ ಬಾಂಧವರಿಂದ ವಿವಿಧ ಮನೋರಂಜನೆ ಕಾರ್ಯಕ್ರಮ ನಡೆಯಿತು.
ವಾಗ್ಮಿ, ಸಾಮಾಜಿಕ ಚಿಂತಕ, ನಿರೂಪಕ ಎನ್.ಆರ್.ದಾಮೋದರ ಶರ್ಮಾ ಬಾರ್ಕೂರು ಹಾಗೂ ನಿಟ್ಟೆ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಪಿ.ಎನ್.ಶೋಭಾ ಆಚಾರ್ಯ ಅವರಿಗೆ ಪ್ರೇರಣಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಮಿತಿ ವತಿಯಿಂದ 58 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಮತ್ತು ಕೆಮ್ಮಣ್ಣು ತೆಂಕುಮನೆ ರತ್ನಾವತಿ ಮತ್ತು ಮೋನಯ್ಯ ಆಚಾರ್ಯ ಅವರ ಸ್ಮರಣಾರ್ಥ ಅವರ ಮೊಮ್ಮಕ್ಕಳಿಂದ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.