World Water Day : ಮಾರ್ಚ್ 22ರಂದು ವಿಶ್ವ ಜಲ ದಿನ ಹಿನ್ನೆಲೆಯಲ್ಲಿ ಕನ್ನಡದ ನಂಬರ್ 1 ದಿನಪತ್ರಿಕೆ ವಿಜಯವಾಣಿ ವತಿಯಿಂದ ವಿದ್ಯಾಕಾಶಿ ಧಾರವಾಡದಲ್ಲಿ ವಾಕಥಾನ್ ಹಮ್ಮಿಕೊಳ್ಳಲಾಗಿದೆ.
ಸ್ವಚ್ಛತೆ-ಆರೋಗ್ಯ- ಜಾಗೃತಿ ರ್ಯಾಲಿ ಥೀಮ್ನ ಅಡಿಯಲ್ಲಿ ಮಾರ್ಚ್ 23ರ ಭಾನುವಾರ ಬೆಳಗ್ಗೆ 6 ಗಂಟೆಗೆ ಧಾರವಾಡದಲ್ಲಿ ವಾಕಥಾನ್ ಜರುಗಲಿದೆ. ಇಲ್ಲಿನ ಕೆಸಿಡಿ ಸರ್ಕಲ್‌ನಿಂದ ಬೆಳಗ್ಗೆ 6 ಗಂಟೆಗೆ ಆರಂಭವಾಗಲಿರುವ ವಾಕಥಾನ್, ಎಲ್‌ಐಸಿ, ಜ್ಯುಬಿಲಿ ಸರ್ಕಲ್, ಕಾರ್ಪೋರೇಷನ್, ಅಂಜುಮನ್ ಸರ್ಕಲ್, ಆಜಾದ್ ಪಾರ್ಕ್, ಜ್ಯುಬಿಲಿ ಸರ್ಕಲ್, ಕೋರ್ಟ್ ಸರ್ಕಲ್, ಬಸಪ್ಪ ಖಾನಾವಳಿ, ಮಂದಾರ ಹೊಟೇಲ್ ಎಲ್ಐಸಿ ಮೂಲಕ ಸಾಗಿ ಮತ್ತೆ ಕೆಸಿಡಿ ತಲುಪಿ ಮುಕ್ತಾಯಗೊಳ್ಳಲಿದೆ.
ಬೆಳಗ್ಗೆ 9.30ರಿಂದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. 1 ರಿಂದ 4ನೇ ತರಗತಿಯವರಿಗೆ ಪರಿಸರ, 5 ರಿಂದ 7ನೇ ತರಗತಿಯವರಿಗೆ ನೀರು ಉಳಿಸಿ ಮತ್ತು 8 ರಿಂದ 9ನೇ ತರಗತಿಯವರಿಗೆ ಜಾಗತಿಕ ತಾಪಮಾನ ಥೀಮ್ನಲ್ಲಿ ಚಿತ್ರಕಲಾ ಸ್ಫರ್ಧೆಯನ್ನು ಏರ್ಪಡಿಸಲಾಗಿದೆ.
ಚಿತ್ರಕಲಾ ಸ್ಪರ್ಧೆ ಮಾತ್ರವಲ್ಲದೇ, ಝುಂಬಾ ಡಾನ್ಸ್ ಕೂಡ ಆಯೋಜನೆ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 8884432382 / 8884432301 ಮತ್ತು 9886922116 ನಂಬರ್ ಅನ್ನು ಸಂಪರ್ಕಿಸಬಹುದಾಗಿದೆ.ಉಚಿತ ನೋಂದಣಿಗಾಗಿ ಈ ಕೆಳಗಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ