ಉಳ್ಳಾಲ: ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಫೆ.22ರಂದು ಉಳ್ಳಾಲ ನಗರಸಭೆಯ ಮಹಾತ್ಮ ಗಾಂಧಿ ರಂಗಮಂದಿರದಲ್ಲಿ ನಡೆಯಲಿರುವ ‘ವೀರರಾಣಿ ಅಬ್ಬಕ್ಕ ಉತ್ಸವ’ದ ಆಮಂತ್ರಣ ಕುತ್ತಾರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಂತಲಾ ಪ್ರಶಸ್ತಿ ಪುರಸ್ಕೃತ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ಬಿಡುಗಡೆಗೊಳಿಸಿದರು.
ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ, ಅಬ್ಬಕ್ಕ ಉತ್ಸವ ಸಮಿತಿಯಲ್ಲಿ ಎಲ್ಲ ಪಕ್ಷ, ಜಾತಿ, ಧರ್ಮೀಯರಿದ್ದರೂ ನಮ್ಮೊಳಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಬ್ಬಕ್ಕಳ ಹೆಸರಲ್ಲಿ ನಡೆಯುವ ಉತ್ಸವ ಯಶಸ್ವಿಗೊಳಿಸುವುದು ಹಾಗೂ ಉಳ್ಳಾಲ ಭಾಗದಲ್ಲಿ ಕೋಮು ಸೌಹಾರ್ದತೆ ಕಾಪಾಡಬೇಕು ಎನ್ನುವುದು ಸಮಿತಿ ಆಶಯ ಎಂದರು.
ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ವಿಧುಷಿ ರಾಜಶ್ರೀ ಉಳ್ಳಾಲ್, ಉತ್ಸವ ಸಮಿತಿ ಉಪಾಧ್ಯಕ್ಷರಾದ ಆಲಿಯಬ್ಬ, ದೇವಕಿ ಆರ್.ಉಳ್ಳಾಲ್ ಉಪಸ್ಥಿತರಿದ್ದರು.
ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ ಕಾರ್ಯಕ್ರಮದ ರೂಪುರೇಷೆ ನೀಡಿದರು. ಕೆಎಂಕೆ ಮಂಜನಾಡಿ ನಿರೂಪಿಸಿದರು. ಶಶಿಕಾಂತಿ ವಂದಿಸಿದರು.