ಜಿಲ್ಲೆ

ಪ್ರೇಮಿಗಳ ದಿನ ಹುಡುಗಿಯರ ಕಾಟ ತಾಳಲಾರೆ ಪ್ಲೀಸ್​ 5 ದಿನ ರಜೆ ಕೊಡಿ ಸರ್..!​

ಚಾಮರಾಜನಗರ: ಪ್ರೇಮಿಗಳ ದಿನಾಚರಣೆಗೆ ದಿನಗಣನೆ ಆರಂಭವಾಗಿದೆ. ಯುವಕ-ಯುವತಿಯರು ತಮ್ಮ ಪ್ರೇಮಿಗಳಿಗೆ ಸರ್ಪ್ರೈಸ್​ ಗಿಫ್ಟ್​ ನೀಡಿ ಖುಷಿಪಡಿಸಲು ವ್ಯಾಲಂಟೈನ್ಸ್ ಡೇಗೆ ಎದುರು ನೋಡುತ್ತಿದ್ದಾರೆ. ಆದರೆ, ಈ ಪ್ರೇಮಿಗಳ ದಿನದ ಸಹವಾಸವೇ ಬೇಡ. ನನಗೆ ಐದು ದಿನ ರಜೆ ಕೊಟ್ಟುಬಿಡಿ ಎಂದು ಕಾಲೇಜು ಯುವಕನೊಬ್ಬ ಪ್ರಾಂಶುಪಾಲರಿಗೆ ಬರೆದಿರುವ ಪತ್ರ ವೈರಲ್​ ಆಗಿದೆ.

ಎಸ್. ಶಿವರಾಜು ವಿಕ್ಟರ್ ರಜೆಗಾಗಿ ಪತ್ರ ಬರೆದ ವಿದ್ಯಾರ್ಥಿ. ಈತ ಕೊಳ್ಳೇಗಾಲದ ಮಹದೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿ. ಫೆ. 14ರಂದು ದೇಶಾದ್ಯಂತ ಆಚರಿಸುತ್ತಿರುವ ಪ್ರೇಮಿಗಳ ದಿನದಂದು ಹುಡುಗಿಯರ ಕಾಟವನ್ನು ತಾಳಲಾರೆ, ಹೀಗಾಗಿ ನನಗೆ ಐದು ದಿನಗಳ ಕಾಲ ರಜೆ ಕೊಡಿ ಎಂದು ಪತ್ರದಲ್ಲಿ ಶಿವರಾಜ್​ ಮನವಿ ಮಾಡಿಕೊಂಡಿದ್ದಾರೆ.

ವಿಶೇಷವೆಂದರೆ, ಶಿವರಾಜ್​ ಬರೆದ ಪತ್ರದ ಮೇಲೆ ಪ್ರಾಂಶುಪಾಲರ ಸೀಲ್ ಹಾಗು ಸಹಿ ಸಹ ಇರುವುದು ರಜೆಗೆ ಅನುಮತಿ ದೊರಕಿದೆ ಎನ್ನಲಾಗಿದೆ. ಆದರೆ, ಎಷ್ಟು ಸತ್ಯವೋ ಎಂದು ತಿಳಿದುಬಂದಿಲ್ಲ. ಆದರೂ ಪ್ರಾಂಶುಪಾಲರಿಗೆ ಬರೆದ ಪತ್ರ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗಿದೆ. (ದಿಗ್ವಿಜಯ ನ್ಯೂಸ್​)