ಉಳ್ಳಾಲ: ಖುತುಬುಝ್ಝಮಾನ್ ಅಸ್ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ(ಖ.ಸಿ) ತಂಙಳ್ ಅವರ 432ನೇ ವಾರ್ಷಿಕ, 22ನೇ ಪಂಚವಾರ್ಷಿಕ ಉರುಸ್ ಪ್ರಯುಕ್ತ ಮೇಲಂಗಡಿ ಮೊಹಲ್ಲಾ ವತಿಯಿಂದ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಪ್ರಮುಖರಾದ ಬಾವ ಮತ್ತು ಯು.ಟಿ.ಮುಹಮ್ಮದ್ ಧ್ವಜಾರೋಹಣಗೈದರು. ಮಸೀದಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಫಾರೂಕ್ ಉಳ್ಳಾಲ, ಅರಬಿಕ್ ಟ್ರಸ್ಟ್ ಮಾಜಿ ಕಾರ್ಯದರ್ಶಿ ಆಸೀಫ್ ಅಬ್ದುಲ್ಲ, ಉಪಾಧ್ಯಕ್ಷ ಅದ್ದಮ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಕೋಶಾಧಿಕಾರಿ ಅಬ್ದುಲ್ ರಶೀದ್, ಲತೀಫ್ ಚೈಮೊನ್, ಅನ್ಸಾರ್, ಮುಹಿಯುದ್ದೀನ್ ಉಳ್ಳಾಲ, ಖಾದರ್, ಕೇಂದ್ರ ಸಮಿತಿ ಸದಸ್ಯರಾದ ಜೈನುದ್ದೀನ್ ಮೆಲಂಗಡಿ, ಇಶಾಕ್, ಕೌನ್ಸಿಲರ್ ಜಬ್ಬಾರ್, ಉಸ್ಮಾನ್ ಕಲ್ಲಾಪು, ಮಿಲ್ಲತ್‌ನಗರ ಮೊಹಲ್ಲಾದ ಅಧ್ಯಕ್ಷ ಖಲೀಲ್, ಅಕ್ಕರೆಕರೆ ಮೊಹಲ್ಲಾದ ಮೈಯದ್ದಿ, ಕೈಕೋರೋಡ್ ಮಸೀದಿ ಅಬ್ದುಲ್ ಲತೀಫ್, ಮದ್ರಸದ ಅಧ್ಯಾಪಕರು ಉಪಸ್ಥಿತರಿದ್ದರು. ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಅನಸ್ ಅಝ್ಹರಿ ದುವಾ ನೆರವೇರಿಸಿದರು. ಸಲಾಮ್ ಮದನಿ ಕಾರ್ಯಕ್ರಮ ನಿರೂಪಿಸಿದರು.