ಜಿಲ್ಲೆ

ಅಪಾಯದಲ್ಲಿ ಉಚ್ಚಿಲ ಬೀಚ್ ರಸ್ತೆ

Avinash R

ಉಳ್ಳಾಲ: ಸೋಮೇಶ್ವರ ನ್ಯೂಉಚ್ಚಿಲದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಅಲೆಗಳು ಮನೆ ಹಾಗೂ ರಸ್ತೆಗೆ ಬಡಿಯುತ್ತಿದ್ದು ಸೋಮೇಶ್ವರ-ಉಚ್ಚಿಲ ಬೀಚ್ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.

ಎರಡು ವರ್ಷಗಳ ಹಿಂದೆ ಬಟ್ಟಪ್ಪಾಡಿ ಪ್ರದೇಶದ ಬೀಚ್ ರಸ್ತೆ ಸಮುದ್ರಪಾಲಾಗಿ ಸಂಪರ್ಕ ಕಡಿತಗೊಂಡಿತ್ತು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಿದ್ದರಾಮಯ್ಯ ಬಟ್ಟಪ್ಪಾಡಿಗೆ ಭೇಟಿ ನೀಡಿದ್ದರೂ ಪ್ರಯೋಜನ ಶೂನ್ಯವಾಗಿತ್ತು. ಇತ್ತೀಚೆಗೆ ನೂತನ ಸಂಸದರು ಸ್ಥಳೀಯ ಪ್ರದೇಶಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯದ ಬಗ್ಗೆ ಮಾತನಾಡಿದ್ದರು. ನ್ಯೂಉಚ್ಚಿಲದ ವಾಸ್ಕೊ ರೆಸಾರ್ಟ್ ಎದುರು ಕಡಲ್ಕೊರೆತ ತೀವ್ರಗೊಂಡಿದ್ದು, ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಕಡಲ ತೀರದಲ್ಲಿರುವ ಸೋಮೇಶ್ವರ ಗ್ರಾಪಂ ಮಾಜಿ ಸದಸ್ಯ ಯೋಗೀಶ್ ಎಂಬುವರ ಮನೆ ಸಮುದ್ರಪಾಲಾಗುವ ಭೀತಿ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಯೋಗೀಶ್ ಅವರ ಕುಟುಂಬವನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.