ಸಾಂದರ್ಭಿಕ ಚಿತ್ರ  
ಜಿಲ್ಲೆ

ಈಜಲು ಹೋದವರು ನಾಪತ್ತೆ; ಯುವಕರಿಬ್ಬರಿಗಾಗಿ ಹುಡುಕಾಟ

Webdesk - Ravikanth

ಗದಗ: ಈಜಲು ಹೋದವರು ನಾಪತ್ತೆಯಾಗಿದ್ದು, ಒಂದೇ ವಯಸ್ಸಿನ ಯುವಕರಿಬ್ಬರಿಗಾಗಿ ಹುಡುಕಾಟ ಆರಂಭವಾಗಿದೆ. ಗದಗ ಜಿಲ್ಲೆಯಲ್ಲಿ ಇಂದು ಇಂಥದ್ದೊಂದು ಪ್ರಕರಣ ವರದಿಯಾಗಿದೆ.

ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದ ಸಮೀಪದ ಹೊಂಡದಲ್ಲಿ ಈಜಲು ಹೋದ ಬಸವರಾಜ್ (17), ಈರಣ್ಣ (17) ಎಂಬಿಬ್ಬರು ನಾಪತ್ತೆ ಆಗಗಿದ್ದಾರೆ. ಇವರಿಬ್ಬರ ಉಡುಪು ಹೊಂಡದ ಬಳಿ ಪತ್ತೆ ಆಗಿದ್ದರಿಂದ ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಯುವಕರಿಬ್ಬರಿಗಾಗಿ ಹುಡುಕಾಟ ಆರಂಭಗೊಂಡಿದೆ.