ಮೈಸೂರು: ಎಲೆ ತೋಟದ ಬಳಿ ಭಾನುವಾರ ತಡರಾತ್ರಿ ಜೋಡಿ ಕೊಲೆಯಾಗಿದ್ದು, ಮತ್ತೊಬ್ಬನ ಮೇಲೂ ಮಾರಣಾಂತಿಕ ಹಲ್ಲೆ ನಡೆದಿದೆ.
ಮೈಸೂರಿನ ಗೌರಿಶಂಕರ ನಗರದ ನಿವಾಸಿಗಳಾದ ಕಿರಣ್ (29) ಮತ್ತು ಕಿಶನ್ (29) ಬರ್ಬರವಾಗಿ ಕೊಲೆಯಾದವರು. ಈ ಘಟನೆಯಲ್ಲಿ ಮಧು ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿರಿ ಅಡಕೆ ರೂಪದಲ್ಲಿ ಮನೆಗೆ ಬಂದ ಜವರಾಯ 1 ವರ್ಷದ ಮಗುವಿನ ಪ್ರಾಣ ಹೊತ್ತೊಯ್ದ!
ಆಸ್ತಿ ವಿಚಾರ ಮತ್ತು ಹಳೇ ದ್ವೇಷದ ಹಿನ್ನೆಲೆ ಕಿರಣ್, ಕಿಶನ್, ಮಧು ಎಂಬಾತನನ್ನು ಸ್ನೇಹಿತರರ ಮತ್ತೊಂದು ತಂಡವೇ ಕೊಲೆ ಮಾಡಲು ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದೆ ಎನ್ನಲಾಗಿದೆ. ಈ ಪೈಕಿ ಮಧು ಪ್ರಾಣಪಾಯದಿಂದ ಪಾರಾಗಿದ್ದು, ಕಿರಣ್ ಮತ್ತು ಕಿಶನ್ ಮೃತಪಟ್ಟಿದ್ದಾರೆ. ರಕ್ತಸಿಕ್ತವಾಗಿ ಬಿದ್ದಿದ್ದ ಮೃತದೇಹಗಳನ್ನ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಘಟನಾ ಸ್ಥಳಕ್ಕೆ ಡಿಸಿಪಿ ಡಾ.ಎ.ಎನ್. ಪ್ರಕಾಶ್ ಗೌಡ, ಎಸಿಪಿ ಪೂರ್ಣಚಂದ್ರ, ಕೆ.ಆರ್. ಪೊಲೀಸ್ ಠಾಣೆ ಇನ್ಸ್ಪೆಕ್ಟರ್, ಶ್ವಾನದಳ, ಬೆರಳಚ್ಚು ತಂಡ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ಸಂಬಂಧ ಮಾತನಾಡಿರುವ ಗಾಯಾಳು ಮಧು, ನಾನು ಮತ್ತು ಕಿರಣ್, ಕಿಶನ್ ಮೂವರು ಚಿಕನ್ ಮಾಡಿಕೊಂಡು ಎಲೆ ತೋಟದ ಬಳಿ ಎಣ್ಣೆ ಪಾರ್ಸಲ್ ತೆಗೆದುಕೊಂಡು ಹೋಗಿ ಕುಡಿಯುತ್ತಿದ್ದೆವು. ಅಲ್ಲಿಗೆ ಬಂದ ಮೀಸೆ ಸ್ವಾಮಿ ಎಂಬಾತನ ಮೈದುನ ಮಾರಣಾಂತಿಕ ಹಲ್ಲೆ ಮಾಡಿದ್ದು, ಇಬ್ಬರನ್ನು ಕೊಂದ. ಜಾಗದ ವಿಚಾರವಾಗಿ ಕಿರಣ್ ಹಾಗೂ ಸ್ವಾಮಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ. ಕೃಷ್ಣ ರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.