ಕೊಲೆಯಾದ ಕಾವ್ಯ ಮತ್ತು ನಾರಾಯಣಸ್ವಾಮಿ 
ಜಿಲ್ಲೆ

ಅನೈತಿಕ ಸಂಬಂಧ, ಗಂಡನೇ ಕೊಂದ!?; ಜೋಡಿ ಕೊಲೆ ಪ್ರಕರಣ, ಒಬ್ಬನ ಬಂಧನ...

Webdesk - Ravikanth

ಆನೇಕಲ್: ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೇರಿ ಮಹಿಳೆಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ವಿಪರ್ಯಾಸವೆಂದರೆ ಕೊಲೆಗೀಡಾದ ಮಹಿಳೆಯ ಪತಿಯೇ ಆರೋಪಿ. ಚಿಕ್ಕಹಾಗಡೆ ವಾಸಿ ಮುತ್ತುರಾಜ ಬಂಧಿತ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಸೂರ್ಯನಗರ ಸಿಟಿಯ ರಾಮಯ್ಯ ಬಡಾವಣೆಯಲ್ಲಿ ಡಿ. 11ರಂದು ಈ ಜೋಡಿ ಕೊಲೆಯಾಗಿತ್ತು. ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಮತ್ತು ಕಾವ್ಯ ಎಂಬಾಕೆಯ ಶವ ಜೊತೆಯಲ್ಲೇ ಕಂಡುಬಂದಿತ್ತು. ಇವರಿಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.

ಪ್ರಕರಣ ಸಂಬಂಧ ಕೊಲೆ ಕೇಸು ದಾಖಲಿಸಿಕೊಂಡಿದ್ದ ಸೂರ್ಯನಗರ ಪೊಲೀಸರು ತನಿಖೆಗಿಳಿದಿದ್ದರು. ಕೊಲೆ ನಡೆದ ಎರಡೇ ದಿನಗಳಲ್ಲಿ ಅವರು ಆರೋಪಿ ಮುತ್ತುರಾಜನನ್ನು ಬಂಧಿಸಿದ್ದಾರೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಿರಬಹುದು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಆರೋಪಿಗಳ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು ಎಂದು ಬೆಂಗಳೂರು ಗ್ರಾಮಾಂತರ ಎಸ್​ಪಿ ಕೆ.ವಂಶಿಕೃಷ್ಣ ತಿಳಿಸಿದ್ದಾರೆ.

ಆರೋಪಿ ಮುತ್ತುರಾಜ್