ಜಿಲ್ಲೆ

ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ ದ್ವಿತೀಯ ವರ್ಷದ ಪುಣ್ಯಸ್ಮರಣೆ

ತುಮಕೂರು: ತ್ರಿವಿಧ ದಾಸೋಹಿ, ಮಹಾಶಿವಯೋಗಿ ಶಿವಕುಮಾರ ಶ್ರೀಗಳ ದ್ವಿತೀಯ ಪುಣ್ಯಸಂಸ್ಮರಣೋತ್ಸವವನ್ನು ಇಂದು ಶ್ರದ್ಧಾಭಕ್ತಿಯಿಂದ ಸಿದ್ದಗಂಗಾ ಮಠದಲ್ಲಿ ಆಚರಿಸಲಾಗುತ್ತಿದೆ.

ಶಿವಕುಮಾರ ಶ್ರೀಗಳ ಗದ್ದುಗೆಗೆ ಮಠಾಧ್ಯಕ್ಷ ಸಿದ್ದಲಿಂಗಶ್ರೀಗಳು ಹರಗುರುಚರಮೂರ್ತಿಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.

ಬೆಳ್ಳಿರಥದಲ್ಲಿ ಶ್ರೀಗಳ ಭಾವಚಿತ್ರ ಉತ್ಸವ: ಶ್ರೀಗಳ ಗದ್ದುಗೆಯಿಂದ ಬೆಳ್ಳಿರಥದಲ್ಲಿ ಶಿವಕುಮಾರ ಶ್ರೀಗಳ ಭಾವಚಿತ್ರದ ಉತ್ಸವವು ಶ್ರೀಮಠದಲ್ಲಿ ಆವರಣದಲ್ಲಿ ಜರುಗಿತು. ಸಹಸ್ರಾರು ಭಕ್ತರು ಶ್ರೀಮಠದ ಕಡೆ ಮುಖಮಾಡಿದ್ದು ಬೆಳಗಿನಿಂದಲೇ ಶ್ರೀಮಠದಲ್ಲಿ ಭಕ್ತಸಾಗರ ಹರಿಯುತಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11 ಕ್ಕೆ ದ್ವಿತೀಯ ಪುಣ್ಯಸಂಸ್ಮರಣೋತ್ಸವ ಸಮಾರಂಭ ನಡೆಯಲಿದೆ. ಸಿದ್ದಲಿಂಗಶ್ರೀಗಳು ಸಾನ್ನಿಧ್ಯವಹಿಸುವರು.

ಬೆಳಗಿನಿಂದಲೇ ಶ್ರೀಮಠದಲ್ಲಿ ಪ್ರಸಾದ ವ್ಯವಸ್ಥೆ ಆರಂಭವಾಗಿದೆ. ಭಕ್ತರಿಗೆ ಬೆಳಗಿನ ಉಪಹಾರದ ವ್ಯವಸ್ಥೆಯನ್ನು 7 ಕಡೆ ಮಾಡಲಾಗಿದೆ.