More

    ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಮೊದಲನೇ ನೋಟದಲ್ಲೇ ಪ್ರೀತಿ ಹುಟ್ಟಬಹುದು..

    ಮೇಷ: ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಅಕ್ಕಪಕ್ಕದ ಜನರು ತಕರಾರು ಮಾಡಿಯಾರು. ಅವರ ಜತೆ ವಾದ ಮಾಡದಿರಿ. ಶುಭಸಂಖ್ಯೆ: 4

    ವೃಷಭ: ಸಣ್ಣಪುಟ್ಟ ವ್ಯವಹಾರಗಳೂ ದೊಡ್ಡ ಮಟ್ಟದ ಸಂಘರ್ಷವನ್ನು ತಂದೊಡ್ಡಿಬಿಡಬಹುದು. ಸ್ವಲ್ಪ ಎಚ್ಚರದಿಂದಲೇ ಮಾತನಾಡಿ. ಶುಭಸಂಖ್ಯೆ: 8

    ಮಿಥುನ: ಯಾವುದೇ ಪ್ರಮಾಣದ ಸಾಲವನ್ನು ಕೊಡದಿರಿ. ಪಡೆಯುವುದಕ್ಕೂ ಮುಂದಾಗದಿರಿ. ಗ್ರಹಗತಿಗಳು ಈ ವೇಳೆ ಧನಾತ್ಮಕವಾಗಿಲ್ಲ. ಶುಭಸಂಖ್ಯೆ: 2

    ಕಟಕ: ಮಕ್ಕಳನ್ನು ಮಿತ್ರರಂತೆ ಕಾಣಬೇಕಾದುದು ಅಗತ್ಯ. ಹಾಗೆಂದು ಹಿರಿಯತನದ ಜವಾಬ್ದಾರಿಯನ್ನು ಮಾತ್ರ ಖಂಡಿತ ಮರೆಯದಿರಿ. ಶುಭಸಂಖ್ಯೆ: 6

    ಸಿಂಹ: ಉತ್ತಮ ಲಾಭಕ್ಕೆ ದಾರಿ ಆಗಬಹುದಾದಂತಹ ವಹಿವಾಟುಗಳನ್ನೂ ಈ ಸಂದರ್ಭದಲ್ಲಿ ತುಸು ಎಚ್ಚರಿಕೆಯಿಂದಲೇ ಮುನ್ನಡೆಸಿ. ಶುಭಸಂಖ್ಯೆ: 5

    ಕನ್ಯಾ: ಹತ್ತಿರದವರೇ ನಿಮಗೆ ಸಂದಿಗ್ಧದ ಪರಿಸ್ಥಿತಿಯನ್ನು ತರುವಂತಹ ಸಾಧ್ಯತೆ ಹೆಚ್ಚಾಗಿದೆ. ಯಾವುದಕ್ಕೂ ನಿಮ್ಮ ಎಚ್ಚರದಲ್ಲಿ ನೀವು ಇರಿ. ಶುಭಸಂಖ್ಯೆ: 1

    ತುಲಾ: ಚಲನಚಿತ್ರ, ವಜ್ರಾಭರಣ, ರಫ್ತು ಇತ್ಯಾದಿಗಳಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ನಿರ್ಲಕ್ಷ್ಯನ್ನು ತೋರಿಸುವುದು ಬೇಡವೇ ಬೇಡ. ಶುಭಸಂಖ್ಯೆ: 7

    ವೃಶ್ಚಿಕ: ಜನರ ಮನಸ್ಸನ್ನು ಮಾತಿನ ಜಾಣ್ಮೆಯಿಂದಲೇ ಗೆಲ್ಲಿ. ಕ್ರಿಯಾಶೀಲತೆಯೇ ಶ್ರೀರಕ್ಷೆಯಾಗಿ ನಿಮ್ಮನ್ನು ರಕ್ಷಿಸಲಿದೆ. ಗುರುಸ್ಮರಣೆ ಮಾಡಿ. ಶುಭಸಂಖ್ಯೆ: 3

    ಧನಸ್ಸು: ಹತ್ತಿರದ ಊರಿನ ಪ್ರವಾಸ ಗಂಟುಬೀಳಬಹುದು. ಈ ಸಂದರ್ಭದಲ್ಲಿ ಆರೋಗ್ಯದ ಕುರಿತಾಗಿ ವಿಶೇಷ ಕಾಳಜಿಯನ್ನು ವಹಿಸಲೇಬೇಕು. ಶುಭಸಂಖ್ಯೆ: 9

    ಮಕರ: ನಿಗೂಢವಾದ ಅನುಭವವೊಂದು ಒದಗಿ ಒಳ್ಳೆಯ ಕಾರ್ಯ ಜರುಗುವುದರ ಮೂಲಕ ವಿಶೇಷ ಕೀರ್ತಿಶಾಲಿಗಳಾಗುವಿರಿ. ಶುಭಸಂಖ್ಯೆ: 4

    ಕುಂಭ:  ಮೊದಲ ನೋಟದಲ್ಲೇ ಪ್ರೀತಿ ಚಿಗುರಬಹುದು. ಎಲ್ಲ ಬೆಳವಣಿಗೆಗಳೂ ಕ್ಷಿಪ್ರವಾಗಿ ಜರುಗಿ ಶೀಘ್ರ ವಿವಾಹವಾಗುವ ಸಾಧ್ಯತೆ ಇದೆ. ಶುಭಸಂಖ್ಯೆ: 8

    ಮೀನ : ಭೂಮಿಗೆ ಸಂಬಂಧಿಸಿದಂತಹ ಮಧ್ಯವರ್ತಿತನ ಅಥವಾ ಮಾರಾಟದ ವ್ಯವಹಾರಗಳಲ್ಲಿ ಕೊಂಚ ಜಾಣತನದಿಂದ ವರ್ತಿಸಬೇಕು. ಶುಭಸಂಖ್ಯೆ: 2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts