ಜಿಲ್ಲೆ

ತುಮಕೂರಲ್ಲಿ ಜಿಲೆಟಿನ್​​ ಸ್ಫೋಟಕ್ಕೆ ಮನೆ ದ್ವಂಸ

arunakunigal

ತುಮಕೂರು: ಶಿವಮೊಗ್ಗದ ಹುಣಸೋಡು ಗ್ರಾಮದ ಕಲ್ಲು ಕ್ವಾರಿಯಲ್ಲಿ ಜಿಲೆಟಿನ್​​ ತುಂಬಿದ್ದ ಲಾರಿ ಸ್ಫೋಟ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಇಂತಹದ್ದೇ ಮತ್ತೊಂದು ಘಟನೆ ತುಮಕೂರು ಜಿಲ್ಲೆಯಲ್ಲಿ ಸಂಭವಿಸಿದೆ.

ತುಮಕೂರು ತಾಲೂಕಿನ ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಸ್ಕಲ್ ಗ್ರಾಮದ ಲಕ್ಷ್ಮೀಕಾಂತ್ ಎಂಬುವರ ಮನೆಯಲ್ಲಿದ್ದ ಜಿಲೆಟಿನ್ ಕಡ್ಡಿ ಸ್ಫೋಟಗೊಂಡಿದ್ದು, ಮನೆ ದ್ವಂಸಗೊಂಡಿದೆ. ಇದನ್ನೂ ಓದಿರಿ ಕೈ ಕೊಟ್ಟ ಪ್ರೇಯಸಿಯ ಬರ್ತ್​ ಡೇ ಪಾರ್ಟಿಗೆ ಮಾಜಿ ಲವರ್ ಎಂಟ್ರಿ! ನೋಡನೋಡುತ್ತಿದ್ದಂತೆ ನಡೆಯಿತು ದುರಂತ

ಕಲ್ಲು ಕ್ವಾರೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀಕಾಂತ, ಜಿಲೆಟಿನ್​ ಕಡ್ಡಿಯನ್ನು ತನ್ನ ಮನೆಯಲ್ಲಿ ಇಟ್ಟಿದ್ದರು. ಬಿಸಿಲಿನ ತಾಪಕ್ಕೆ ಜಿಲೆಟಿನ್ ಕಡ್ಡಿ ಸ್ಫೋಟಗೊಂಡಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಮನೆಯ ಸೀಟು ಹಾನಿಯಾಗಿದೆ, ಮನೆ ಗೋಡೆ ಕುಸಿದು ಬಿದ್ದಿದೆ. ಮನೆಯ ಹೊರಗಿದ್ದ ಸುವರ್ಣಮ್ಮ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಶಿವಮೊಗ್ಗದ ಕ್ವಾರಿಯಲ್ಲಿನ ಸ್ಫೋಟಕ್ಕೆ ಅಪಾರ ಪ್ರಮಾಣ ಸಾವು-ನೋವು ಸಂಭವಿಸಿತ್ತು. ಘಟನೆ ನಡೆದ ಸ್ಥಳದಲ್ಲಿ ಛಿದ್ರಛಿಧ್ರಗೊಂಡ 5 ಜನರ ಮೃತದೇಹಗಳು ಸಿಕ್ಕಿದ್ದವು.