ಕಾರ್ಕಳ: ಆಂಗ್ಲ ವ್ಯಾವಹಾರಿಕ ಭಾಷೆಯಾದರೆ ತುಳು, ಕನ್ನಡ, ಸಂಸ್ಕೃತ ನಮ್ಮ ಹೃದಯದ ಭಾಷೆ. ಆಂಗ್ಲ ವಾಧ್ಯಮ ಶಾಲೆಗಳಲ್ಲಿ ಕನ್ನಡ, ತುಳು ಭಾಷೆ ವಾತನಾಡುವುದೇ ಅಪರಾಧ ಎಂಬಂತಹ ಸನ್ನಿವೇಶವಿದೆ. ಇಂತಹ ಸ್ಥಿತಿಯಲ್ಲಿ ಕಾರ್ಕಳ ಜೇಸಿಸ್ ಆಂಗ್ಲ ವಾಧ್ಯಮ ಶಾಲೆಯು ವಾತೃಭಾಷೆ, ದೇವಭಾಷೆಯೆರಡಕ್ಕೂ ಒತ್ತು ನೀಡುತ್ತಿರುವುದು ಶ್ಲಾನೀಯ ಎಂದು ಧಾರ್ಮಿಕ ವಿದ್ವಾನ್ ದಾಮೋದರ ಶರ್ವಾ ಅಭಿಪ್ರಾಯಪಟ್ಟರು.
ಕಾರ್ಕಳ ಜೇಸಿಸ್ ಆಂಗ್ಲ ವಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೇಸಿ ಆಂಗ್ಲ ವಾಧ್ಯಮ ಶಾಲೆಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವ ವಿಷಯದಲ್ಲಿ ನಮಗೆ ಪ್ರೀತಿ, ಗೌರವ ದೊರೆಯುವುದೋ ಅಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ತೃಪ್ತಿ ಸಿಗುತ್ತದೆ ಎಂದರು.
ಜೇಸಿಸ್ ಶಾಲೆ ಸಂಸ್ಕೃತ ಶಿಕ್ಷಕ ಡಾ.ಶಂಕರ್ ನಾರಾಯಣ ಭಟ್ ಅಕ್ಷರಾಭ್ಯಾಸ ನೆರವೇರಿಸಿದರು.
ಶಾಲಾ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್, ಜೇಸಿಐ ಕಾರ್ಕಳ ಅಧ್ಯಕ್ಷೆ ಶ್ವೇತಾ ಜೈನ್, ಮುಖ್ಯ ಶಿಕ್ಷಕಿ ಸುರೇಖಾ ರಾಜ್, ಕಾರ್ಯಕ್ರಮ ಸಂಯೋಜಕಿ ವಂದನಾ ರೈ ಉಪಸ್ಥಿತರಿದ್ದರು. ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಸುಕನ್ಯಾ ವಂದಿಸಿದರು.