ಬೆಂಗಳೂರು: ಶಂಕರಮಠ ವೃತ್ತದ ಬಳಿ ದುಷ್ಕರ್ವಿುಗಳು ಟ್ರಾಫಿಕ್ ಸಿಗ್ನಲ್ನ ಬ್ಯಾಟರಿ ಕಳವು ಮಾಡಿದ್ದಾರೆ. ವಿಜಯನಗರ ಸಂಚಾರ ಠಾಣೆಯ ಮುಖ್ಯಪೇದೆ ಚಂದ್ರಶೇಖರಯ್ಯ ಈ ಬಗ್ಗೆ ಬಸವೇಶ್ವರನಗರ ಠಾಣೆಗೆ ದೂರು ನೀಡಿದ್ದಾರೆ.
ಶನಿವಾರ ಬೆಳಗ್ಗೆ 6.30ರಲ್ಲಿ ಚಂದ್ರಶೇಖರಯ್ಯ ಶಂಕರಮಠ ಜಂಕ್ಷನ್ನಲ್ಲಿ ಕರ್ತವ್ಯಕ್ಕೆ ಹಾಜರಾದಾಗ ಸಿಗ್ನಲ್ ದೀಪಗಳು ಕೆಲಸ ಮಾಡುತ್ತಿರಲಿಲ್ಲ. ತಾಂತ್ರಿಕ ಸಿಬ್ಬಂದಿಯನ್ನು ಕರೆಸಿ ಪರಿಶೀಲಿಸಿದಾಗ ವಿದ್ಯುತ್ ಪೂರೈಕೆಯಾಗದಿರುವುದು ಕಂಡು ಬಂದಿತ್ತು.
ಬ್ಯಾಟರಿ ಬಾಕ್ಸ್ ತೆಗೆದು ನೋಡಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಕಳ್ಳರು ಬಾಕ್ಸ್ನ ಬೀಗ ಮುರಿದು ಬ್ಯಾಟರಿ ಕದ್ದೊಯ್ದಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ರಸ್ತೆಯಲ್ಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು, ಆರೋಪಿಗಳ ಮುಖಚಹರೆ ಗುರುತು ಪತ್ತೆಯಾಗಿದೆ. ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಬಸವೇಶ್ವರನಗರ ಪೊಲೀಸರು ತಿಳಿಸಿದ್ದಾರೆ.