ಜಿಲ್ಲೆ

ಮೂಲಸೌಕರ್ಯ ಒದಗಿಸುವುದು ಅಭಿನಂದನೀಯ : ಸಂಸದ ಕ್ಯಾ.ಬ್ರಿಜೇಶ್ ಚೌಟ ಮೆಚ್ಚುಗೆ

ಸೌಮ್ಯ ಆರ್

ಮೂಲ್ಕಿ: ಸ್ವಚ್ಛ ಭಾರತ ನೆಲೆಯಲ್ಲಿ ಮೂಲ್ಕಿಯ ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸುವ ಕಾರ್ಯ ಅಭಿನಂದನೀಯ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಲ್ಲಿ ಸುಮಾರು 8.50 ಲಕ್ಷ ರೂ. ಅನುದಾನದಲ್ಲಿ ರಾಜ್ಯ ಸರ್ಕಾರ ಹಾಗೂ ಮೂಲ್ಕಿ ನಗರ ಪಂಚಾಯಿತಿ ಸಹಯೋಗದೊಂದಿಗೆ ನ.ಪಂ. ವ್ಯಾಪ್ತಿಯ ಮೂಲ್ಕಿ ಬಸ್ ನಿಲ್ದಾಣದ ಬಳಿ ನಿರ್ಮಾಣಗೊಂಡ ನೂತನ ಶೌಚಗೃಹ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮೂಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪ್ರದೇಶವಾಗಿದ್ದು ದೂರದ ಊರುಗಳಿಂದ ಬಂದಿಳಿಯುವ ಯಾತ್ರಿಕರು ಹಾಗೂ ಪ್ರಯಾಣಿಕರಿಗೆ ಸಹಕಾರ ನೀಡುವ ಈ ಯೋಜನೆ ಅಭಿನಂದನೀಯ ಎಂದರು.

ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನ.ಪಂ. ಉಪಾಧ್ಯಕ್ಷೆ ಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಸದಸ್ಯರಾದ ವಂದನಾ ಕಾಮತ್, ಶೈಲೇಶ್ ಕುಮಾರ್, ಸುಭಾಷ್ ಶೆಟ್ಟಿ, ರಾಧಿಕಾ ಕೋಟ್ಯಾನ್, ಭೀಮಾ ಶಂಕರ್, ಮುಖ್ಯಾಧಿಕಾರಿ ಮಧುಕರ್, ಮಾಜಿ ಸದಸ್ಯರಾದ ಉಮೇಶ್ ಮಾನಂಪಾಡಿ, ಪುರುಷೋತ್ತಮ ಬಡಗಹಿತ್ಲು, ಸ್ಥಳೀಯ ಬಿಜೆಪಿ ನಾಯಕರಾದ ದಿನೇಶ್ ಪುತ್ರನ್ ಬಳ್ಕುಂಜೆ, ರಂಗನಾಥ ಶೆಟ್ಟಿ, ಮನೋಹರ ಕೋಟ್ಯಾನ್, ವಿಕಾಸ್ ಶೆಟ್ಟಿ, ಶ್ಯಾಮ್ ಪ್ರಸಾದ್, ವಿಠ್ಠಲ್ ಎನ್.ಎಂ, ಹರಿಶ್ಚಂದ್ರ ಕೋಟ್ಯಾನ್, ದೇವಪ್ರಸಾದ್ ಕೆಂಪುಗುಡ್ಡೆ, ನವೀನ್‌ರಾಜ್, ಅಶೋಕ್ ಜನನಿ, ಮಹೀಮ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಮಧುಕರ್ ಸ್ವಾಗತಿಸಿದರು. ಶೈಲೇಶ್ ನಿರೂಪಿಸಿದರು.