ಗುತ್ತಿಗೆ ಸಂಸ್ಥೆಗೆ ನಿಷೇಧ, 9 ಕೋಟಿ ರೂ. ದಂಡ

Fine
Published on

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ಚೆರ್ಕಳ-ನೀಲೇಶ್ವರ ರೀಚ್‌ನ ಷಟ್ಪಥ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಮೇಘಾ ಇಂಜಿನಿಯರಿಂಗ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಂದು ವರ್ಷದ ನಿಷೇಧ ಹೇರಿರುವುದಲ್ಲದೆ, ಒಂಬತ್ತು ಕೋಟಿ ರೂ. ದಂಡ ವಿಧಿಸಲಾಗಿದೆ. ಚೆರ್ಕಳ ಸನಿಹದ ಬೇವಿಂಜೆಯಲ್ಲಿ, ಸಿಮೆಂಟ್ ಪ್ಲಾಸ್ಟರಿಂಗ್ ನಡೆಸಲಾಗಿದ್ದ ಭಾರಿ ತಡೆಗೋಡೆ ಬಿರುಸಿನ ಮಳೆಗೆ ಭೂಕುಸಿತಕ್ಕೆ ಕಾರಣವಾಗಿತ್ತು. ಇದರಿಂದ ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು. ತಡೆಗೋಡೆ ಪ್ಲಾಸ್ಟರಿಂಗ್ ನಡೆಸುವಲ್ಲಿ ಉಂಟಾಗಿರುವ ಲೋಪ ಹಾಗೂ ಸೂಕ್ತ ಒಳಚರಂಡಿ ವ್ಯವಸ್ಥೆ ಮಾಡದಿರುವುದು ಇತ್ಯಾದಿ ಕಾರಣಗಳಿಂದ ಇಲ್ಲಿ ಭೂಕುಸಿತಕ್ಕೆ ಕಾರಣವಾಗಿರುವುದಾಗಿ ಸಂಸ್ಥೆ ನಡೆಸಿದ ಆಂತರಿಕ ತನಿಖೆಯಲ್ಲಿ ತಿಳಿದುಬಂದಿದೆ. ಒಂದು ವರ್ಷಕ್ಕೆ ನಿಷೇಧ ಹೇರಿ ಸಂಸ್ಥೆಗೆ ನೋಟಿಸಿಗೆ ಸ್ಪಷ್ಟೀಕರಣ ನೀಡುವಂತೆ ಸಂಸ್ಥೆಗೆ ನೋಟಿಸ್ ಜಾರಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net