ದಾವಣಗೆರೆ: ಎರಡು ದಿನಗಳ ಹಿಂದೆ ಸಂಭವಿಸಿದ ಭೀಕರ ಅಪಘಾತದಲ್ಲಿ ವಿದ್ಯಾರ್ಥಿನಿಯೊಬ್ಬಳು ಸಾವಿಗೀಡಾದ ಸ್ಥಳಕ್ಕೆ ಸಮೀಪದಲ್ಲೇ ಇಂದು ಮತ್ತೊಂದು ಅಪಘಾತ ಸಂಭವಿಸಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ದಾವಣಗೆರೆ ಜಿಲ್ಲೆಯ ಹಳೇ ಪಿ.ಬಿ. ರಸ್ತೆಯ ಆ್ಯಕ್ಸಿಸ್ ಬ್ಯಾಂಕ್ ಬಳಿ ಈ ಅಪಘಾತ ಸಂಭವಿಸಿದ್ದು, ಕರೂರು ನಿವಾಸಿ ಸೈಯಿದಾ ಮೆಹರುನ್ನಿಸಾ (48) ಸಾವಿಗೀಡಾಗಿದ್ದಾರೆ. ಇವರು ಆ್ಯಕ್ಟಿವಾ ಹೋಂಡದಲ್ಲಿ ಮಗಳೊಂದಿಗೆ ಮನೆಗೆ ಮರಳುತ್ತಿದ್ದಾಗ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಸೈಯಿದಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಎರಡು ದಿನಗಳ ಹಿಂದೆ ಇಲ್ಲಿಗೆ ಸಮೀಪದ ಎಂಸಿಸಿ ಬಿ-ಬ್ಲಾಕ್ನಲ್ಲಿ ಇದೇ ರೀತಿ ಅಪಘಾತ ಸಂಭವಿಸಿದ್ದು, ದಂತ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಳು. ಸುತ್ತಮುತ್ತ ಹೆಚ್ಚಾಗಿರುವ ಅಪಘಾತಗಳು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿವೆ.