ಜಿಲ್ಲೆ

ಸೌಲಭ್ಯಗಳಿದ್ದರೂ ಮಕ್ಕಳಿಲ್ಲ!

ಹೇಮನಾಥ್ ಪಡುಬಿದ್ರಿ ಒಂದು ಕಾಲದಲ್ಲಿ ಶೈಕ್ಷಣಿಕವಾಗಿ ಉತ್ತುಂಗದಲ್ಲಿದ್ದು, ವಿದ್ಯಾನಗರವೆಂದೇ ಹೆಸರಾಗಿರುವ ಮುದರಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆಯಲ್ಲಿ ಈಗ ಮಕ್ಕಳ ದಾಖಲಾತಿ ಗಣನೀಯವಾಗಿ ಕುಸಿದಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ವಾಡಿರುವ ಈ ಶಾಲೆಯಲ್ಲಿ ಕಲಿತ ಅದೆಷ್ಟೋ ಮಂದಿ ಉನ್ನತ ಸ್ಥಾನಕ್ಕೇರಿದ್ದಾರೆ. ಸಕಲ ಮೂಲ ಸೌಕರ್ಯಗಳನ್ನು ಹೊಂದಿದ್ದರೂ, ಪ್ರೌಢಶಾಲೆಯಲ್ಲಿ 28, ಪದವಿ ಪೂರ್ವ ಕಾಲೇಜಿನಲ್ಲಿ 23 ಮಂದಿ ಸೇರಿದಂತೆ ಪ್ರಸ್ತುತ ವಿದ್ಯಾರ್ಥಿಗಳ ಸಂಖ್ಯೆ 51ಕ್ಕೆ ಇಳಿದಿದೆ. 8ನೇ ತರಗತಿಗೆ ಮೂರೇ ಮಕ್ಕಳು: 1978ರಲ್ಲಿ 8, 9, 10ನೇ ತರಗತಿಯನ್ನೊಳಗೊಂಡ ಪ್ರೌಢಶಾಲೆ ಆರಂಭವಾಯಿತು. ಆರಂಭದಲ್ಲೇ ಅಧಿಕ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿಯಿಂದ ಪ್ರತಿ ತರಗತಿಯಲ್ಲಿ 2 ವಿಭಾಗಗಳಿದ್ದವು. ಕಾಲಕ್ರಮೇಣ ಸುತ್ತಲಿನ ಪ್ರದೇಶದಲ್ಲಿ ಖಾಸಗಿ ಶಾಲೆಗಳು ತಲೆ ಎತ್ತುತ್ತಿದ್ದಂತೆ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿತು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿಯಲ್ಲಿ 9, 9ನೇ ತರಗತಿಯಲ್ಲಿ 16, 8ನೇ ತರಗತಿಯಲ್ಲಿ ಕೇವಲ 3 ಮಕ್ಕಳಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 10, ಕಲಾ ವಿಭಾಗದಲ್ಲಿ 1: 1996ರಲ್ಲಿ ಪ್ರೌಢಶಾಲೆಯು ಮೇಲ್ದರ್ಜೆಗೇರಿ ವಾಣಿಜ್ಯ, ಕಲಾ ವಿಭಾಗದೊಂದಿಗೆ ಪಿಯುಸಿ ವಿಭಾಗ ಆರಂಭವಾಯಿತು. ಗ್ರಾಮದಲ್ಲಿ ಆರಂಭವಾದ ಏಕೈಕ ಸರ್ಕಾರಿ ಪದವಿ ಪೂರ್ವ ಕಾಲೇಜು ಇದಾಗಿದ್ದು, ಆರಂಭದಲ್ಲಿ ಪ್ರಥಮ, ದ್ವಿತೀಯ ಪಿಯುಸಿ ಸೇರಿ ವಿದ್ಯಾರ್ಥಿಗಳ ದಾಖಲಾತಿ ಶತಕದತ್ತ ಸಾಗಿತ್ತು. ಉತ್ತಮ ಫಲಿತಾಂಶವನ್ನೂ ದಾಖಲಿಸುತ್ತಾ ಬಂದಿತ್ತು. ವಾಣಿಜ್ಯ, ಕಲಾ ವಿಭಾಗದಲ್ಲಿ ಒಟ್ಟು 23 ವಿದ್ಯಾರ್ಥಿಗಳು ವ್ಯಾಸಂಗ ವಾಡುತ್ತಿದ್ದಾರೆ. ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರಥಮ ಪಿಯು ವಾಣಿಜ್ಯ ವಿಭಾಗದಕ್ಕೆ 10 ಹಾಗೂ ಕಲಾ ವಿಭಾಗದಲ್ಲಿ ಏಕೈಕ ವಿದ್ಯಾರ್ಥಿ ದಾಖಲಾಗಿದ್ದು ಪ್ರಥಮ ಪಿಯುಸಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 11ಕ್ಕೆ ಇಳಿದ್ದಿದೆ. ಇದು ಕಾಲೇಜಿನ ಅಳಿವು-ಉಳಿವಿನ ಪ್ರಶ್ನೆಯಾಗಿದೆ.

ಏಕೋಪನ್ಯಾಸಕಿಗೆ ಪೂರ್ಣ ಪ್ರಮಾಣದ ಕರ್ತವ್ಯ

ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರ ಕೊರತೆಯಿಲ್ಲದಿದ್ದರೂ, ಗುವಾಸ್ತ, ಕಚೇರಿ ಸಹಾಯಕರ ಹುದ್ದೆಯನ್ನು ಮುಖ್ಯಶಿಕ್ಷಕರೇ ನಿಭಾಯಿಸಬೇಕಾದ ಪರಿಸ್ಥಿತಿಯಿದೆ. ಪದವಿ ಪೂರ್ವ ವಿಭಾಗದಲ್ಲಿ ಪ್ರಭಾರ ಪ್ರಾಂಶುಪಾಲ ಹುದ್ದೆಯೊಂದಿಗೆ ಪೂರ್ಣಪ್ರವಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಓರ್ವ ಉಪನ್ಯಾಸಕಿ. ಇತರ ಕಾಲೇಜಿನಲ್ಲಿ ಕರ್ತವ್ಯದಲ್ಲಿರುವ ಉಪನ್ಯಾಸಕರು ವಾರದಲ್ಲಿ ಮೂರು ದಿನ ಇಲ್ಲಿಗೆ ನಿಯೋಜನೆಗೊಂಡಿದ್ದಾರೆ. ಗುವಾಸ್ತ, ಕಚೇರಿ ಸಹಾಯಕರ ಹುದ್ದೆ ಖಾಲಿಯಾಗಿದ್ದು, ಪ್ರಭಾರ ಪ್ರಾಂಶುಪಾಲರಾಗಿರುವ ಉಪನ್ಯಾಸಕಿಯೇ ಎಲ್ಲವನ್ನೂ ನಿಭಾಯಿಸಬೇಕಿದೆ.

ಮೂಲ ಸೌಲಭ್ಯಗಳಿಗೆ ಕೊರತೆಯಿಲ್ಲ

ವಿಶಾಲವಾದ ಕ್ರೀಡಾಂಗಣ, ಸುಸಜ್ಜಿತ ಕೊಠಡಿಗಳನ್ನೊಂದಿರುವ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಮೂಲ ಸೌಕರ್ಯಕ್ಕೆ ಯಾವುದೇ ಕೊರತೆಯಿಲ್ಲ. ಶಿಕ್ಷಕರು, ಉಪನ್ಯಾಸಕರು ಊರೂರು ಅಲೆದರೂ ಮಕ್ಕಳ ದಾಖಲಾತಿ ಕೊರತೆ ನೀಗಿಸುವ ಪ್ರಯತ್ನ ಫಲ ನೀಡಿಲ್ಲ. ಗ್ರಾಮದಲ್ಲಿದ್ದ 3 ಸರ್ಕಾರಿ ಕನ್ನಡ ವಾಧ್ಯಮ ಪ್ರಾಥಮಿಕ ಶಾಲೆಗಳು ಮಕ್ಕಳ ಕೊರತೆಯಿಂದ ತೆರೆಮರೆಗೆ ಸರಿದಿವೆ. ಸಾಂತೂರುಕೊಪ್ಲದಲ್ಲಿ ಏಕೈಕ ಸರ್ಕಾರಿ ಪ್ರಾಥಮಿಕ ಶಾಲೆಯಿದೆ. ಅಲ್ಲಿನ ಮಕ್ಕಳನ್ನು ದೂರದ ಮುದರಂಗಡಿ ಪ್ರೌಢಶಾಲೆಗೆ ಸೇರಿಸಲು ಪಾಲಕರು ಮನಸ್ಸು ಮಾಡುತ್ತಿಲ್ಲ. ಅಲ್ಲದೆ ಖಾಸಗಿ ಶಾಲೆಗೆ ಪ್ರಭಾವದಿಂದ ಸರ್ಕಾರಿ ಶಾಲೆಯನ್ನು ಉಳಿಸಲು ಶಿಕ್ಷಕರು ಮಾಡುತ್ತಿರುವ ಪ್ರಯತ್ನವೂ ಕೈಗೂಡುತ್ತಿಲ್ಲ.

ಸುತ್ತಮುತ್ತಲಿನ ಗ್ರಾಮಗಳಲ್ಲಿನ ಖಾಸಗಿ ಶಾಲೆಗಳಿಗೆ ವಾಹನ ವ್ಯವಸ್ಥೆಯಿರುವಂತೆ ಇಲ್ಲಿಗೂ ವಾಹನ ಸೌಲಭ್ಯ ಕಲ್ಪಿಸಿದರೆ ಮಕ್ಕಳನ್ನು ಶಾಲೆಗೆ ಸೇರಿಸುವುದಾಗಿ ಪಾಲಕರು ಹೇಳುತ್ತಾರೆ. ಸುಸಜ್ಜಿತ ವ್ಯವಸ್ಥೆಗಳಿರುವ ಸರ್ಕಾರಿ ಶಾಲೆ ಉಳಿಯಬೇಕು. ಶಾಲೆಯ ಹಳೇ ವಿದ್ಯಾರ್ಥಿ ಸಂದ ಸಭೆ ಕರೆದು ವಾಹನದ ವ್ಯವಸ್ಥೆ ವಾಡುವ ಬಗ್ಗೆೆ ಚರ್ಚಿಸಲಾಗುವುದು. ಪ್ರಾಥಮಿಕ ಶಾಲೆ ಆರಂಭಿಸುವಂತೆಯೂ ಗ್ರಾಪಂನಲ್ಲಿ ನಿರ್ಣಯ ಕೈಗೊಂಡು ಶಿಕ್ಷಣ ಇಲಾಖೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. -ರವೀಂದ್ರ ಪ್ರಭು ಸಾಂತೂರು, ಉಪಾಧ್ಯಕ್ಷರು, ಕಾಲೇಜು ಅಭಿವೃದ್ಧಿ ಸಮಿತಿ