ಕಾಸರಗೋಡು: ನಗರದ ಅಡ್ಕತ್ತಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಬೀಗ ಒಡೆದು ನುಗ್ಗಿದ ಕಳ್ಳರು ನಗದು ಹಾಗೂ ಸಿ.ಸಿ. ಕ್ಯಾಮರಾ ಡಿವಿಆರ್ ಕಳವುಗೈದಿದ್ದಾರೆ. ಜುಲೈ 22 ಹಾಗೂ 23ರ ನಡುವೆ ಕಳವು ನಡೆದಿದ್ದು, 4 ಸಾವಿರ ರೂ. ನಗದು ಹಾಗೂ 10 ಸಾವಿರ ರೂ. ಮೌಲ್ಯದ ಡಿವಿಆರ್ ಕಳವುಗೈದಿರುವ ಬಗ್ಗೆ ಮುಖ್ಯ ಶಿಕ್ಷಕಿ ಸೀವಾ ಸುವರ್ಣ ನೀಡಿದ ದೂರಿನನ್ವಯ ನಗರಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.