ಪಲಿಮಾರಿನ ಯಂಗ್ ಟೈಗರ್ಸ್ ಮತ್ತು ವೀರ ವಿನಾಯಕ ಬಳಗದಿಂದ ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೆರವು ನೀಡಲಾಯಿತು.  
ಜಿಲ್ಲೆ

ಹುಲಿವೇಷದ ಹಣದಿಂದ ಚಿಕಿತ್ಸೆಗೆ ನೆರವು

ಪಡುಬಿದ್ರಿ: ದಸರಾ ಅಂಗವಾಗಿ ಪಲಿಮಾರಿನ ಯಂಗ್ ಟೈಗರ್ಸ್ ಮತ್ತು ವೀರ ವಿನಾಯಕ ಬಳಗವು ಹುಲಿವೇಷ ಧರಿಸಿ ಸಂಗ್ರಹಿಸಿದ ಉಳಿಕೆ ಮೊತ್ತವನ್ನು ಪಲಿಮಾರು ಗ್ರಾಮದ ಬಡಾ ಆನಾರೋಗ್ಯ ಪೀಡಿತರ ಚಿಕಿತ್ಸೆಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕರುಣಾಕರ ಮತ್ತು ಪೂರ್ಣಿಮಾ ದಂಪತಿ ಪುತ್ರ ನಿಶಾನ್, ಗುರು ಮತ್ತು ವಿನಿತ ದಂಪತಿ ಪುತ್ರ ಕೀರ್ತನ್ ಹಾಗೂ ಪೂವಪ್ಪ ಮತ್ತು ಜಯಂತಿ ದಂಪತಿ ಪುತ್ರ ರಾಜೇಶ್ ಅವರ ಮನೆಗಳಿಗೆ ತೆರಳಿ ಧನಸಹಾಯ ನೀಡಲಾಯಿತು.

ಯಂಗ್ ಟೈಗರ್ಸ್‌ನ ಶಿಕ್ಷಿತ್, ಯತೀಶ್, ಖಾಸಿಂ, ನಂದೇಶ್, ಪಲಿಮಾರು ಗ್ರಾಪಂ ಉಪಾಧ್ಯಕ್ಷ ರಾಯೇಶ್ವರ ಪೈ, ಮಾಜಿ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ, ಪಲಿಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಸುವರ್ಣ, ವೀರ ವಿನಾಯಕ ಬಳಗದ ರತ್ನಾಕರ, ಸ್ಥಳೀಯರಾದ ಕರುಣಾಕರ ಉಪಸ್ಥಿತರಿದ್ದರು.