ವಿಜಯನಗರ: ಪ್ರವಾಸಕ್ಕೆಂದು ಬಂದ ಹೈದ್ರಾಬಾದ್ ಮೂಲದ ಯುವಕ ನೀರಿನಲ್ಲಿ ಕೊಚ್ಚಿಹೋದ ಎರಡು ದಿನಗಳ ಬಳಿಕ ಆತನ ಶವ ಪತ್ತೆಯಾಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಗೆ ಕುಟುಂಬ ಸಮೇತ ಆಗಮಿಸಿದ್ದ. ಈ ವೇಳೆ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ವೇಳೆ ಆಯಾತಪ್ಪಿ ನದಿಯಲ್ಲಿ ಕೊಚ್ಚಿಹೋಗಿದ್ದನು. ಕಿರಣ್ (25) ಮೃತ ಯುವಕ.
ಕೊಪ್ಪಳ ಜಿಲ್ಲೆಯ ಹುಲಗಿಯಿಂದ ಈ ಯುವಕ ಕುಟುಂಬ ಸಮೇತ ಹಂಪಿ ನೋಡಲು ಬಂದಿದ್ದ. ನಿನ್ನೆ ಬೆಳಗ್ಗೆ ಕಾಲುಜಾರಿ ನದಿಯಲ್ಲಿ ಬಿದ್ದಿದ್ದನು. ಈ ಬಗ್ಗೆ ಹಂಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)