ಕೊಕ್ಕಡ: ಕೊಕ್ಕಡ, ನೆಲ್ಯಾಡಿ, ಪಟ್ರಮೆ, ಹಳ್ಳಿಂಗೇರಿ ಮಾಯಿಲ ಕೋಟೆಗೆ ಸಂಪರ್ಕಿಸುವ ಕೊಕ್ಕಡದ ಪ್ರಮುಖ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು, ಸ್ಥಳಿಯ ರಿಕ್ಷಾ ಚಾಲಕರು ಶ್ರಮದಾನ ಮಾಡಿ ಹೊಂಡ ಮುಚ್ಚಿದರು.
ಸಂಚಾರ ದಟ್ಟಣೆ ಇರುವ ಈ ರಸ್ತೆಯ ಅಗಲ ಕೂಡ ಕಡಿಮೆ ಇದ್ದು ದಿನನಿತ್ಯ ಪ್ರಯಾಣಿಸುವ ರಿಾ ಚಾಲಕರಿಗೆ ದೊಡ್ಡ ಸಮಸ್ಯೆಯಾಗಿತ್ತು. ಇದನ್ನು ಮನಗಂಡ ಕೊಕ್ಕಡದ ರಿಾ ಚಾಲಕರಾದ ಸಂದೀಪ್, ಉಮೇಶ್, ಸಚಿನ್, ಟಿ.ಎಲ್.ಪ್ರಮೋದ್ ಬದಿಯಡ್ಕ, ಚಂದ್ರ, ಜಿತೇಶ್, ಕೃಷ್ಣ ಮುಂತಾದವರು ಸೇರಿ ಕೆಂಪು ಕಲ್ಲು ಸಂಗ್ರಹಿಸಿ ಪಿಕಪ್ ವಾಹನದ ಮೂಲಕ ತಂದು ಹೊಂಡ&ಗುಂಡಿಗಳನ್ನು ಮುಚ್ಚಿ ರಸ್ತೆಗೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ. ಪಿಕಪ್ ಮಾಲೀಕ ಸತೀಶ್ ಬದಿಯಡ್ಕ ಸಹಕಾರ ನೀಡಿದ್ದಾರೆ.