ಜಿಲ್ಲೆ

ಗ್ರಾಮಾಭಿವೃದ್ಧಿಯಿಂದ ದೇವಸ್ಥಾನ ವೃದ್ಧಿ : ಶ್ರೀಧರ್ ರಾವ್ ಅಭಿಪ್ರಾಯ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

ಸೌಮ್ಯ ಆರ್

ಬೆಳ್ತಂಗಡಿ: ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮದ ಜನರು ಅಭಿವೃದ್ಧಿ ಹೊಂದಿದ್ದು, ಪ್ರತಿಯೊಂದು ದೇವಸ್ಥಾನ ಅಭಿವೃದ್ಧಿ ಕೂಡ ಕ್ಷೇತ್ರದ ಸಹಾಯದಿಂದಲೇ ಆಗುತ್ತಿದೆ ಎಂದು ಸದಾಶಿವೇಶ್ವರ ದೇವಳ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ್ ರಾವ್ ಹೇಳಿದರು.

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ವಲಯದ ಕಳೆಂಜ ಬಿ ಕಾರ್ಯಕ್ಷೇತ್ರದ ಸ್ಪಂದನ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಡೀಕಮ್ಮ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟ ಅಧ್ಯಕ್ಷ ಬಾಲಕೃಷ್ಣ ಗೌಡ ಮತ್ತು ಮತ್ತು ಸವಿತಾ, ಭಜನಾ ಮಂಡಳಿ ಅಧ್ಯಕ್ಷ ದಿನೇಶ್ ಹಾಗೂ ಹರೀಶ್ ಉಪಸ್ಥಿತರಿದ್ದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಪುಷ್ಪಾ ಅನಿಸಿಕೆ ವ್ಯಕ್ತಪಡಿಸಿದರು.

ಸಂಯೋಜಕಿ ಗೀತಾ ವರದಿ ವಾಚಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರ ವಸಂತ್ ಕಾರ್ಯಕ್ರಮ ನಿರೂಪಿಸಿ, ಸುಶೀಲಾ ಸ್ವಾಗತಿಸಿ. ಮೇಲ್ವಿಚಾರಕ ರವೀಂದ್ರ ಬಿ.ವಂದಿಸಿದರು. ಸದಸ್ಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕೇಂದ್ರದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಡಾ.ಹೇಮಾವತಿ ವೀ.ಹೆಗ್ಗಡೆಯವರ ಪರಿಕಲ್ಪನೆ ಮೂಲ ಸ್ವರೂಪವಾದ ಜ್ಞಾನವಿಕಾಸ ಕೇಂದ್ರದ ಮೂಲಕ ಮಹಿಳೆಯರ ಅಭಿವೃದ್ಧಿ ಶಿಸ್ತುಬದ್ಧ ಜೀವನ ಶೈಲಿ, ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡುವುದರೊಂದಿಗೆ ಪ್ರತಿಭೆಗಳನ್ನು ಅನಾವರಣಗೊಳಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರು ಪ್ರಬುದ್ಧತೆ ಹೊಂದಿದ್ದು, ಪ್ರತಿ ತಿಂಗಳು ಉತ್ತಮ ಮಾಹಿತಿಯೊಂದಿಗೆ ಪ್ರತಿಭೆ ಹೊರಹಾಕಲು ಒಂದು ವೇದಿಕೆಯಾಗಿದೆ. ಸುರೇಂದ್ರ, ಯೋಜನಾಧಿಕಾರಿ