ಜಿಲ್ಲೆ

VIDEO| ಎಣ್ಣೆಗಾಗಿ ಕಳ್ಳದಾರಿ ಹಿಡಿದ ತಮಿಳುನಾಡು ಜನರಿಂದ ಗಡಿಭಾಗದಲ್ಲಿ ಆತಂಕ!

ಬೆಂಗಳೂರು: ತಮಿಳುನಾಡಿನಲ್ಲಿ ಕರೊನಾ ವೈರಸ್​ ಪ್ರಕರಣಗಳು ಹೆಚ್ಚಾಗಿದ್ದು, ಹೊಸೂರು ಗಡಿಭಾಗದ ತಮಿಳಿಗರಿಂದ ಕನ್ನಡಿಗರಲ್ಲಿ ಆತಂಕ ಮನೆ ಮಾಡುವಂತಾಗಿದೆ.

ಎಣ್ಣೆ ಖರೀದಿಸಲು ತಮಿಳುನಾಡಿನ ಹೊಸೂರು ಭಾಗದ ಜನರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್​ ತಾಲೂಕಿನ ಬಳ್ಳೂರು ಗ್ರಾಮದ ಮಾರ್ಗವಾಗಿ ಯಾವುದೇ ಮಾಸ್ಕ್​ ಅಥವಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ಬರುತ್ತಿರುವುದು ಹೊಸ ತಲೆನೋವಿಗೆ ಕಾರಣವಾಗಿದೆ.

ಬಳ್ಳೂರು ಗ್ರಾಮದ ಎನ್.ಆರ್.ಐ ಬಡಾವಣೆಯ ತೋಪುಗಳ ಮೂಲಕ ತಮಿಳಿಗರು ತಮ್ಮ ವಾಹನಗಳಲ್ಲಿ ಬರುತ್ತಿದ್ದಾರೆ. ಇಲ್ಲಿ ಅಂತಾರಾಜ್ಯ ಸಂಪರ್ಕಕ್ಕೆ ಯಾವುದೇ ಭಯ ಇಲ್ಲದಂತಾಗಿದೆ. ಖರೀದಿಸಿ ಎಣ್ಣೆಯನ್ನು ರಾಜಾರೋಷವಾಗಿ ಕೈಯಲ್ಲಿ ಹಿಡಿದು ನೂರಾರು ವಾಹನಗಳ ಮೂಲಕ ಹೋಗುತ್ತಿದ್ದಾರೆ. ಗಂಟೆಗೆ ಬರೋಬ್ಬರಿ 100ಕ್ಕೂ ಹೆಚ್ಚು ವಾಹನಗಳು ಸಂಚಾರ ಮಾಡುತ್ತವೆ.

ಇನ್ನು ಸ್ಥಳದಲ್ಲಿ ಪೊಲೀಸರಾಗಲಿ ಅಥವಾ ಅಧಿಕಾರಿಗಳಾಗಲಿ ಇಲ್ಲ. ಅತ್ತಿಬೆಲೆ ಮೂಲಕ ಬಂದರೆ ವಾಹನಗಳ ತಪಾಸಣೆ ಆಗುತ್ತದೆ. ಹೀಗಾಗಿ ಎಲ್ಲಾ ವಾಹನಗಳು ಹೊಸೂರು ಭಾಗದಿಂದ ಬಳ್ಳೂರಿನತ್ತ ಬರುತ್ತಿವೆ. ಇದರಿಂದಾಗಿ ಸ್ಥಳೀಯ ಜನರಲ್ಲಿ ಆತಂಕ ಶುರುವಾಗಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​)