ಜಿಲ್ಲೆ

ತಾಳಿಮಠ ಪೂರ್ವಭಾವಿ ಸಭೆ

Avinash R

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ತಾಳಿಮಠದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಜ.29ರಿಂದ ೆ.5ರ ತನಕ ನಡೆಯುವ ಬ್ರಹ್ಮಕಲಶೋತ್ಸವ, ಬ್ರಹ್ಮ ಮಂಡಲ ಕಾರ್ಯಕ್ರಮದ ಬಗ್ಗೆ ಗ್ರಾಮಸ್ಥರ ಪೂರ್ವಭಾವಿ ಸಭೆ ಡಿ.8ರಂದು ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಅಧ್ಯಕ್ಷ ದಯಾನಂದ ಭಟ್ ಮಾಹಿತಿ ನೀಡಿದರು. ಬ್ರಹ್ಮಕಶೋತ್ಸವ, ಬ್ರಹ್ಮ ಮಂಡಲ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಹಕಾರ ಬಯಸಿದರು.

ವಿವಿಧ ಸಮಿತಿ ರಚನೆ ಮಾಡಲಾಯಿತು. ಕುಶಲ ಪೂಜಾರಿ, ಧರ್ಮದರ್ಶಿ ವಿವೇಕಾನಂದ, ಕೃಷ್ಣ ಭಟ್, ದಿವಾಕರ ಕರ್ಕೇರ, ವೆಂಕಟೇಶ ಬಾರಂಗಳ, ದಯಾನಂದ ಕೋಟ್ಯಾನ್, ರಾಜೇಂದ್ರ ಶೆಣೈ, ಸುಜಾತ ಪೂಜಾರಿ, ಪ್ರಕಾಶ್ ಶೆಟ್ಟಿ, ಸೀತಾ ಕೋಟ್ಯಾನ್, ಅರುಣ್ ಕುಮಾರ್, ಸಂತೋಷ್ ಶಾಂತಿಪಲ್ಕೆ, ಸುಮಿತ್ರಾ, ಗ್ರಾಮಸ್ಥರು ಉಪಸ್ಥಿತರಿದ್ದರು.