ಜಿಲ್ಲೆ

ಅವಶೇಷಗಳಡಿ ಸಿಲುಕಿ ಗಾಯಗೊಂಡಿದ್ದ ನಾಗರಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಹಾವೇರಿ: ಕಟ್ಟಡವೊಂದರ ತೆರವು ಕಾರ್ಯಾಚರಣೆ ವೇಳೆ ಅವಶೇಷಗಳಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ನಾಗರಹಾವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ರಕ್ಷಿಸಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಉರಗ ತಜ್ಞ ಸ್ನೇಕ್ ನಾಗರಾಜ್​ ಹಾಗೂ ಹಾವೇರಿ ಪಾಲಿಕ್ಲಿನಿಕ್​ನ ಡಾ. ಸಣ್ಣಬೀರಪ್ಪ ಸಣ್ಣಪುಟ್ಟಕ್ಕನವರ ಸಕಾಲಿಕ ಕಾರ್ಯಾಚರಣೆಯಿಂದ ಪ್ರಾಣ ಸಂಕಟದಲ್ಲಿ ನರಳುತ್ತಿದ್ದ ನಾಗರಹಾವು ಬದುಕುಳಿದಿದೆ.

ಹಾವೇರಿ ನಗರದ ಹೊರವಲಯದಲ್ಲಿರುವ ಡಾಬಾವೊಂದರ ಹಳೆಯ ಕಟ್ಟಡ‌ ತೆರವು ಕಾರ್ಯಾಚರಣೆ ವೇಳೆ ಹಾವೊಂದು ಅವಶೇಷಗಳಡಿ ಸಿಲುಕಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಉರಗತಜ್ಞ ಸ್ನೇಕ್​ ನಾಗರಾಜ್​ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ನಾಗರಾಜ್ ಗಾಯಗೊಂಡಿದ್ದ​ ಹಾವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಾವಿನ ಕೆಲಭಾಗದಲ್ಲಿ ಗಾಯವಾಗಿರುವುದನ್ನು ಗಮನಿಸಿದ ವೈದ್ಯ ಡಾ. ಸಣ್ಣಬೀರಪ್ಪ ಸಣ್ಣಪುಟ್ಟಕ್ಕನವರ ಸಕಾಲದಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ನೋವಿನಲ್ಲಿ ಒದಾಡುತ್ತಿದ್ದ ಮೂಕಜೀವಿಗೆ ಆಸರೆಯಾಗಿದ್ದಾರೆ. ಆಪರೇಷನ್​ ಬಳಿಕ ಸ್ನೇಕ್ ನಾಗರಾಜ್​ ಐದು ದಿನ ಮನೆಯಲ್ಲಿ ಆರೈಕೆ ಮಾಡಿ, ನಂತರ ಅದನ್ಉ ಕರ್ಜಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.