ಜಿಲ್ಲೆ

ಚಿತ್ರ ನಟ ಸುರೇಂದ್ರ ಬಂಟ್ವಾಳ್​ ಬರ್ಬರ ಹತ್ಯೆ!

arunakunigal

ಮಂಗಳೂರು: ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್ ಬರ್ಬರ ಹತ್ಯೆಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್​ನಲ್ಲಿರುವ ಫ್ಲಾಟ್​ನಲ್ಲೇ ಸುರೇಂದ್ರ ಬಂಟ್ವಾಳ್ ಕೊಲೆಯಾಗಿದೆ. ಹಣಕಾಸು ವಿಚಾರಕ್ಕೆ ಜೊತೆಗಿದ್ದವರಿಂದಲೇ ಬಂಟ್ವಾಳ್ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಸವರ್ಣದೀರ್ಘ ಸಂಧಿ ಕನ್ನಡ ಚಿತ್ರ ಸೇರಿ ಹಲವು ತುಳು ಸಿನಿಮಾದಲ್ಲಿ ನಟಿಸಿದ್ದ ಸುರೇಂದ್ರ ಬಂಟ್ವಾಳ್, ಈ ಹಿಂದೆ ಹಿಂದುಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು.

2018ರ ಜೂನ್‌ನಲ್ಲಿ ಬಂಟ್ವಾಳ ಪೇಟೆಯಲ್ಲಿ ತಲವಾರು ಹಿಡಿದು ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದ ಬಂಟ್ವಾಳ್​ರ ವಿಡಿಯೋ ಅಂದು ವೈರಲ್​ ಆಗಿತ್ತು. ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಸುರೇಂದ್ರ ಬಂಟ್ವಾಳ್, ಜಾಮೀನಿನ ‌ಮೇಲೆ ಹೊರ ಬಂದಿದ್ದರು.