ಬದಿಯಡ್ಕ: ದೇಶದ ಪೌರರ ಮತದಾನದ ಹಕ್ಕು ಸಂರಕ್ಷಿಸಬೇಕೆಂಬ ಬೇಡಿಕೆಯೊಂದಿಗೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ಮುನ್ನಡೆಸುವ ‘ವೋಟರ್ ಅಧಿಕಾರ್’ ಯಾತ್ರೆಗೆ ಬೆಂಬಲ ಸೂಚಿಸಿ ಬದಿಯಡ್ಕ ಪೇಟೆಯಲ್ಲಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಮಂಗಳವಾರ ಮೆರವಣಿಗೆ, ಸಾರ್ವಜನಿಕ ಸಭೆ ನಡೆಯಿತು.
ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಾಂಗ್ರೆಸ್ ನೇತಾರ ಪಿ.ಜಿ.ಚಂದ್ರಹಾಸ ರೈ ಉದ್ಘಾಟಿಸಿದರು. ಪ್ರಮುಖರಾದ ತಿರುಪತಿ ಕುಮಾರ್ ಭಟ್, ಜಗನ್ನಾಥ ರೈ, ಚಂದ್ರಹಾಸನ್ ಮಾಸ್ತರ್, ಶಾಫಿ ಗೋಳಿಯಡ್ಕ, ಶ್ರೀನಾಥ್ ಬದಿಯಡ್ಕ, ಕೃಷ್ಣದಾಸ್ ದರ್ಬೆತ್ತಡ್ಕ, ಲೋಹಿತಾಕ್ಷನ್ ನಾಯರ್, ಕುಮಾರನ್ ನಾಯರ್, ರವಿ ಕುಂಟಾಲುಮೂಲೆ, ಸತೀಶ್ ಪೆರುಮುಂಡ, ರಾಮಕೃಷ್ಣನ್, ಖಮರುದ್ದೀನ್, ಮುಹಮ್ಮದ್ ಅರಮನೆ, ವಿನ್ಸಂಟ್ ವಿದ್ಯಾಗಿರಿ, ಸಿರಿಲ್ ಡಿಸೋಜ, ವಿನ್ಸಂಟ್ ಉಕ್ಕಿನಡ್ಕ, ಆನಂದ ಕಂಗಿಲ, ನಾರಾಯಣ ಭಂಡಾರಿ, ರಾಮ ಗೋಳಿಯಡ್ಕ, ಜೋಸೆಫ್, ಕೃಷ್ಣ ಕುಮಾರ್, ನಿಜೀಷ್ ಮೊದಲಾದವರು ಮಾತನಾಡಿದರು.