ಕೆರೂರ : ತಮ್ಮೂರುಗಳಿಗೆ ತೆರಳಲು ಸಮರ್ಪಕ ಬಸ್‌ಗಳಿಲ್ಲದ್ದಕ್ಕೆ ಶಾಲೆ- ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು ಸೋಮವಾರ ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಶಾಲೆ- ಕಾಲೇಜುಗಳನ್ನು ಮುಗಿಸಿ ತಮ್ಮೂರಿಗೆ ತೆರಳಲು ಬಸ್ ನಿಲ್ಲಾಣಕ್ಕೆ ಆಗಮಿಸಿ ಬಸ್‌ಗಾಗಿ ಕಾಯ್ದು ಕುಳಿತಿದ್ದರು. ಅಲ್ಲದೆ, ಸುತ್ತಲಿನ ಗ್ರಾಮಗಳಾದ ಹಾಲಿಗೇರಿ, ನೀರಲಕೇರಿ, ರಡ್ಡೇರ ತಿಮ್ಮಾಪೂರ ಗ್ರಾಮಗಳ ಜನತೆಯೂ ನಿಲ್ದಾಣದಲ್ಲಿದ್ದರು. ಆದರೆ, ಬಸ್‌ಗಾಗಿ ಕಾದು ಸುಸ್ತಾದರೂ ಬಸ್‌ಗಳು ಬಾರದ್ದರಿಂದ ರೊಚ್ಚಿಗೆದ್ದು ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹೆಚ್ಚುತ್ತಿರುವ ಮದ್ರಾಸ್ ಐ ಸೊಂಕು
ಸದ್ಯ ಬಸ್‌ಗಳಲ್ಲಿ ನಾರಿಯರ ಸಂಖ್ಯೆ ಹೆಚ್ಚಿದ್ದು, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ವಿದ್ಯಾರ್ಥಿನಿಯರ ಪಾಡು ಹೇಳತೀರದು. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ವಾಸ್ತವ ಅರಿತು ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಿದ್ಯಾರ್ಥಿಗಳ ತೊಂದರೆ ಕಂಡು ಮರುಗಿದ ಸಾರ್ವಜನಿಕರು ಹಾಗೂ ಸವಾರರು ಕೆಲ ಹೊತ್ತು ರಸ್ತೆಯಲ್ಲಿ ಕಾದು ನಿಲ್ಲುವಂತಾಯಿತು. ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ವಿದ್ಯಾರ್ಥಿಗಳ ಮನವೊಲಿಸಲಾಯಿತು.
ಇದನ್ನೂ ಓದಿ: ಸ್ಮಶಾನಕ್ಕಾಗಿ ರಸ್ತೆ ತಡೆ ನಡೆಸಿದ ಗ್ರಾಮಸ್ಥರು
ಶಂಕರ ಮೇಟಿ, ಪ್ರವೀಣ ಕಂಬಾರ, ಸಿದ್ದು ಅನವಾಲ ಗಣೇಶ ಕುರಿ, ಸಿದ್ದಪ್ಪ ಕಳಸದ, ಬೀರಪ್ಪ ದಳಸಿದ್ದಪ್ಪನವರ, ಮಂಜುನಾಥ ಅಜ್ಜೋಡಿ, ವಿಠ್ಠಲ ಕಳಸದ, ಕಾದಂಬರಿ ಘಂಟಿ, ಕಾವ್ಯ ನರಗುಂದ, ಅರುಣ ಕಡಕೋಳ, ಪುಲಕೇಶಿ ಗುರುಸಿದ್ದನವರ ಮತ್ತಿತರರಿದ್ದರು.