ಹೆಚ್ಚುತ್ತಿರುವ ಮದ್ರಾಸ್ ಐ ಸೊಂಕು

Madras eye infection on the rise
ಮದ್ರಾಸ್ ಐ ಸೋಂಕಿತ ಕಣ್ಣು
Published on

ಗುಳೇದಗುಡ್ಡ: ಪಟ್ಟಣದಲ್ಲಿ ಮದ್ರಾಸ್ ಐ (ಕಣ್ಣು ಬೇನೆ) ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಸೋಂಕು ಚಿಕ್ಕಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.

ಕಣ್ಣಲ್ಲಿ ನೀರು ಬರುವುದು, ಕಣ್ಣು ಕೆಂಪಾಗುವುದು, ಕಣ್ಣು ಚುಚ್ಚಿದಂತಾಗುವುದು, ಕಣ್ಣಿನಲ್ಲಿ ಬಿಳಿ ದ್ರವ ಬರುವುದು ಈ ಸೋಂಕಿನ ಲಕ್ಷಣಗಳಾಗಿವೆ. ಹಾಸ್ಟೆಲ್, ವಸತಿ ಶಾಲೆ, ಶಾಲೆ-ಕಾಲೇಜುಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈಗಾಗಲೇ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ ಹಾಗೂ ಜಿಲ್ಲೆಯಾದ್ಯಂತ ಈ ಸೋಂಕು ಹೆಚ್ಚುತ್ತಿದ್ದರಿಂದ ಜನತೆಯಲ್ಲಿ ಆತಂಕ ಮನೆ ಮಾಡಿದೆ.

ಪಟ್ಟಣದ ಸರ್ಕಾರಿ, ಖಾಸಗಿ ಆಸ್ಪತ್ರೆಗೆ ನಿತ್ಯ ಪ್ರಕರಣಗಳು ವರದಿಯಾಗುತ್ತಿದ್ದು, ಜನರು ಜಾಗರೂಕತೆ ವಹಿಸಿದರೆ ಮೂರ‌್ನಾಲ್ಕು ದಿನಗಳಲ್ಲಿ ಉಪಶಮನ ಮಾಡಬಹುದಾಗಿದೆ. ಜನದಟ್ಟಣೆಯಲ್ಲಿದ್ದಾಗ ಕಪ್ಪು ಕನ್ನಡಕ ಬಳಸಿದರೆ ಒಳ್ಳೆಯದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಅಲ್ಲದೆ, ಸಾಬೂನಿನಿಂದ ಪದೇ ಪದೆ ಕೈಗಳನ್ನು ತೊಳೆದುಕೊಳ್ಳುವುದು, ವೈದ್ಯರ ಸಲಹೆ ಪಡೆದು ಕಣ್ಣಿನ ಡ್ರಾಪ್ಸ್ ಹಾಕಿಕೊಳ್ಳುವುದು ಹಾಗೂ ಪ್ರತ್ಯೇಕ ಟವೆಲ್, ಸೋಪು ಬಳಸಬೇಕೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net