ಬೆಂಕಿ  
ಜಿಲ್ಲೆ

ವಿದ್ಯಾರ್ಥಿಗಳ ಸಮಯ ಪ್ರಜ್ಞೆ

ಇಂದಿರಾ ಎನ್ ಕೆ

ಕೋಟ: ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಗಿಳಿಯಾರು ಪರಿಸರದಲ್ಲಿ ಕಾಡು ಪ್ರದೇಶಕ್ಕೆ ಆವರಿಸಿಕೊಂಡಿದ್ದ ಬೆಂಕಿಯನ್ನು ಸ್ಥಳೀಯ ಶಾಲಾ ವಿದ್ಯಾರ್ಥಿಗಳು ನಂದಿಸಿ ಆಗುವ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಘಟನೆ ವಿವರ: ಕೋಟದ ಮೂಡುಗಿಳಿಯಾರಿನ ಎಸ್‌ಎಚ್‌ಆರ್‌ಎಫ್ ಸಮೀಪ ಕಾಡು ಪ್ರದೇಶಕ್ಕೆ ಬೆಂಕಿ ತಗುಲಿದ್ದು. ಅದನ್ನು ವಿಕ್ಷೀಸಿದ ಸ್ಥಳೀಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ನೇಸರ, ವಿಕಾಸ, ಮನ್ವಿತಾ ಮತ್ತು ಆರನೇ ತರಗತಿಯ ಗೌರವ ಸಮಯ ಪ್ರಜ್ಞೆ ಹಾಗೂ ಸಾಹಸದಿಂದ ಬೆಂಕಿ ನಂದಿಸಲು ಮುಂದಾದರು. ನಂತರ ಎಸ್‌ಎಚ್‌ಆರ್‌ಎಫ್‌ನ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಜತೆ ಕೈಜೋಡಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.