

ಪಡುಬಿದ್ರಿ: ಕಾಪು ತಾಲೂಕಿನ ವಿವಿಧ ಭಾಗಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಅಗತ್ಯತೆ ಇರುವುದರಿಂದ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಮಹಿಳೆಯರು ಶಕ್ತಿ ಯೋಜನೆ ಲಾಭ ಪಡೆಯುವಂತಾಗಲು, ಕಾಪು ತಾಲೂಕಿನಲ್ಲಿ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕೆಂದು ಗ್ಯಾರಂಟಿ ಸಮಿತಿ ಸದಸ್ಯರು ಮನವಿ ಮಾಡಿದರು.
ಕಾಪು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಶಿರ್ವ, ಮೂಡುಬೆಳ್ಳೆ, ಇನ್ನಂಜೆ, ಮಲ್ಲಾರು, ಮಜೂರು, ಬೆಳಪು, ಪಲಿಮಾರು, ಮುದರಂಗಡಿ, ಎಲ್ಲೂರು, ಉಡುಪಿ, ಮಂಗಳೂರು ಮಾರ್ಗದಲ್ಲಿ ಮಹಿಳೆಯರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ ಅಗತ್ಯತೆ ಇದೆ ಎಂದು ಸದಸ್ಯರು ಆಗ್ರಹಿಸಿದರು.
ಗೃಹಜ್ಯೋತಿ ಯೋಜನೆಯಲ್ಲಿ ಕಾಪು ತಾಲೂಕಿನಲ್ಲಿ ಡಿಸೆಂಬರ್ ತಿಂಗಳಲ್ಲಿ ಫಲಾನುಭವಿಗಳ 2.49 ಕೋಟಿ ರೂ. ಮೊತ್ತದ ವಿದ್ಯುತ್ ಬಿಲ್ ಹಾಗೂ ಯೋಜನೆ ಆರಂಭವಾದ ನಂತರ ಇದುವರೆಗೆ ಕಾಪು ತಾಲೂಕಿಗೆ 44 ಕೋಟಿ ರೂ. ಮೊತ್ತದ ವಿದ್ಯುತ್ ಬಿಲ್ ಗೃಹಜ್ಯೋತಿ ಯೋಜನೆಯಡಿ ತಾಲೂಕಿನ ಅರ್ಹ 31915 ಕುಟುಂಬಗಳು ವಿನಾಯಿತಿ ಪಡೆದಿದೆ ಎಂದು ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಅರವಿಂದ್ ಮಾಹಿತಿ ನೀಡಿದರು.
ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ರವೀಂದ್ರ ಹಾಗೂ ಉದ್ಯೋಗ ವಿನಿಮಯ ಕಚೆೇರಿ ದೀಕ್ಷಿತ್ ಶಕ್ತಿ ಮತ್ತು ಯುವನಿಧಿ ಯೋಜನೆ ಮಾಹಿತಿ ನೀಡಿದರು. ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಆಹಾರ ನಿರೀಕ್ಷಕ ಲೀಲಾನಂದ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ್, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಸಹಾಯಕ ಲೆಕ್ಕಾಧಿಕಾರಿ ಸುಂದರ್ ನಾಯಕ್ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಗೃಹಲಕ್ಷ್ಮೀ ಯೋಜನೆ 2023ರ ಆಗಸ್ಟ್‌ನಿಂದ 2024 ಅಕ್ಟೋಬರ್‌ವರಗೆ ತಾಲೂಕಿನ 25,416 ಫಲಾನುಭವಿಗಳಿಗೆ 72.07 ಕೋಟಿ ರೂ. ಮೊತ್ತ ಪಾವತಿಯಾಗಿರುತ್ತದೆ. ಖಾತೆಗಳ ಮ್ಯಾಪಿಂಗ್ ಇತ್ಯಾದಿ ತಾಂತ್ರಿಕ ಸಮಸ್ಯೆ ಇರುವ 380 ಫಲಾನುಭಾವಿಗಳ ಮ್ಯಾಪಿಂಗ್ ಮಾಡುವ ಮತ್ತು ಸರಿಪಡಿಸುವ ಅವಕಾಶ ಈಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೆೇರಿಯಲ್ಲಿ ಲಭ್ಯವಿದೆ. -ಕುಮಾರ್ ಶಿಶು ಅಭಿವೃದ್ಧಿ ಯೋಜನಾಧಿಕಾರಿ https://www.vijayavani.net/acceptance-of-requests-distribution-of-benefits https://www.vijayavani.net/donors-support-progress-in-government-schools