ಕುಂದಾಪುರದ ತ್ರಿವರ್ಣ ಕಲಾ ತರಗತಿಯ 23 ವಿದ್ಯಾರ್ಥಿಗಳು ರಚಿಸಿದ 12 ಅಡಿ ಅಗಲ ಮತ್ತು 4 ಅಡಿ ಎತ್ತರದ ಮರಳು ಶಿಲ್ಪಾಕೃತಿ.  
ಜಿಲ್ಲೆ

ವಿದ್ಯಾರ್ಥಿಗಳಿಂದ ಮರಳು ಶಿಲ್ಪಾಕೃತಿ ರಚನೆ

ಇಂದಿರಾ ಎನ್ ಕೆ

ಕುಂದಾಪುರ: ಮಹಾಶಿವರಾತ್ರಿ ಪ್ರಯುಕ್ತ ತ್ರಿವರ್ಣ ಕಲಾ ತರಗತಿಯ ವಿದ್ಯಾರ್ಥಿಗಳು ಕೋಟೇಶ್ವರ ಕೋಡಿ ಬೀಚ್‌ನಲ್ಲಿ ಬಿಲ್ವಪತ್ರೆ, ರುದ್ರಾಕ್ಷಿಮಾಲಾವೃತ ಶಿವಲಿಂಗವು ನಂದಿ ಮತ್ತು ಹಾವಿನೊಳಗೊಂಡ ಪಾಳುಬಿದ್ದ ಗುಡಿಯ ಪರಿಕಲ್ಪನೆಯಲ್ಲಿ 12 ಅಡಿ ಅಗಲ ಮತ್ತು 4 ಅಡಿ ಎತ್ತರದ ಮರಳು ಶಿಲ್ಪಾಕೃತಿ ರಚಿಸಿದ್ದಾರೆ.

ಕಲಾವಿದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ ಮತ್ತು ವಿದ್ಯಾರಾಣಿ ಮಾರ್ಗದರ್ಶನದಲ್ಲಿ ಅದ್ವಿತ್‌ಕುಮಾರ್, ಆರಾಂಶ್ ಪೂಜಾರಿ, ಶರಣ್ ಆರ್.ಕುಮಾರ್, ಅಯಾಂತಿಕ, ಕೃತಿ ದೇವಾಡಿಗ, ಸುಯೋಗ್ ಶೆಟ್ಟಿ, ಆಶಿತ್ ಸಂಜಯ್‌ಕುಮಾರ್, ನಿಹಾಲ್ ಜಿ., ಶೌರ್ಯ ಎಸ್.ಪಿ., ಸಾನಿಧ್ಯ ಸಂತೋಷ್ ನಾಯ್ಕ, ರಿಶುಜೆ ಶೆಟ್ಟಿ, ಸಾನ್ವಿ ಎಲ್., ಯಕ್ಷತ್ ಶೆಟ್ಟಿ, ಸ್ಕಂದ, ನಿಶ್ಚಿತಾ ವಿ.ಎಚ್., ಅಮೃತಾ ಶೆಟ್ಟಿ, ಸನ್ನಿಧಿ ಜಿ., ಲಕ್ಷಾೃ ಆರ್., ಅದ್ವಿತ್ ಎಸ್., ಅಯಂತಿಕ ಆರ್.ಪೂಜಾರಿ, ಪ್ರಣೀತ್ ಶೆಟ್ಟಿ, ದೃಶಿಕಾ ಪಿ.ಶೆಟ್ಟಿ, ಪ್ರಾಪ್ತಿ ಪಿ.ಶೆಟ್ಟಿ, ಆರ್ಯಾ ಬಿ.ಭಾಗವಹಿಸಿದ್ದರು.