ಜಿಲ್ಲೆ

ಕೋಟೇಶ್ವರ ಕೆಪಿಎಸ್‌ನಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆ

ಇಂದಿರಾ ಎನ್ ಕೆ

ಕುಂದಾಪುರ: ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆ ನಡೆಯಿತು. ವಿದ್ಯಾರ್ಥಿ ನಾಯಕನಾಗಿ ವಿವೇಕ್, ನಾಯಕಿಯಾಗಿ ಸಂಜನಾ ಹಾಗೂ ಉಪ ನಾಯಕನಾಗಿ ಶ್ರೇಯಸ್ ಆಯ್ಕೆಯಾದರು.

ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕಿ ಸುಚೇತಾ ಭಟ್ ನೇತೃತ್ವದಲ್ಲಿ ಮತಎಣಿಕೆ ನಡೆಯಿತು. ಉಪಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ಚುನಾವಣಾಧಿಕಾರಿಯಾಗಿದ್ದರು.

ಹಿರಿಯ ಶಿಕ್ಷಕಿ ಜಯಶ್ರೀ ಭಟ್ ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಶ್ರೀಕಾಂತ್, ಅನುರಾಧ, ಸಂಧ್ಯಾ, ದಿವ್ಯಪ್ರಭಾ, ಚೈತ್ರಾ, ರೇಶ್ಮಾ, ಪೀತಾಂಬರಿ, ಸುಧಾಬಾಯಿ, ರವಾನಂದ ನಾಯಕ್, ದೀಪಿಕಾ, ಪಲ್ಲವಿ, ನಯನಾ, ರಜನಿ ಕರ್ತವ್ಯ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್ ಹೊಳ್ಳ ಹಾಗೂ ಉದಯ್ ಮಡಿವಾಳ ಎಂ., ನಾಗರತ್ನಾ ಎಂ. ಸಹಕರಿಸಿದರು.