ಜಿಲ್ಲೆ

ಕೊಕ್ಕಡದಲ್ಲಿ ಬೀದಿದೀಪ ಉದ್ಘಾಟನೆ

ಸೌಮ್ಯ ಆರ್

ಕೊಕ್ಕಡ: ಕೊಕ್ಕಡ ಗ್ರಾಪಂ ವ್ಯಾಪ್ತಿಯ ಮಹಾವೀರ ಕಾಲನಿ ಸಂಪರ್ಕ ರಸ್ತೆಯಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ಅಳವಡಿಸಲಾದ ಬೀದಿದೀಪವನ್ನು ಕೊಕ್ಕಡ ಪಾಕ್ಸ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಹಾಗೂ ಸತ್ಯ ಸಾರಮಣಿ ದೈವಸ್ಥಾನ ಅಧ್ಯಕ್ಷ ಗಿರೀಶ್ ಮಹಾವೀರ ಕಾಲನಿ ಉದ್ಘಾಟಿಸಿದರು.

ಉಪ್ಪಾರಪಳಿಕೆಯಿಂದ ಗೋಳಿತೊಟ್ಟು ರಸ್ತೆಯಲ್ಲಿ ಅಳವಡಿಸಲಾದ ಬೀದಿ ದೀಪವನ್ನು ಕೊಕ್ಕಡ ಪಂಚಾಯಿತಿ ಉಪಾಧ್ಯಕ್ಷ ಪ್ರಭಾಕರ್ ಗೌಡ ಉದ್ಘಾಟಿಸಿದರು. ಕೊಕ್ಕಡ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ಯೋಗೀಶ್ ಅಲಂಬಿಲ, ಸದಸ್ಯ ಜಗದೀಶ್ ಕೆಂಪಕೋಡಿ, ಪಿಡಿಒ ದೀಪಕ್ ರಾಜ್, ಕಾರ್ಯದರ್ಶಿ ಭಾರತಿ, ಕೊಕ್ಕಡ ಪ್ಯಾಕ್ಸ್ ನಿರ್ದೇಶಕ ಶ್ರೀನಾಥ್ ಬಡೆಕಾಯಿಲ್, ಕಾಮಗಾರಿ ನಡೆಸಿದ ಪುರುಷೋತ್ತಮ್ ಕೊಕ್ಕಡ, ಮೆಸ್ಕಾಂ ಪವರ್‌ವ್ಯಾನ್‌ಗಳಾದ ರವಿ, ಎಸ್.ಕುಮಾರ್, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಶಶಿ ತಿಪ್ಪಮಜಲ್, ಕಾರ್ಯದರ್ಶಿ ಶ್ರೀಧರ್ ಬಳಕ್ಕ ಉಪಸ್ಥಿತರಿದ್ದರು.