ಜಿಲ್ಲೆ

ಬೀದಿನಾಯಿ ಹಾವಳಿಗೆ ಕಂಗಾಲು!

Avinash R

ಅನ್ಸಾರ್ ಇನೋಳಿ, ಉಳ್ಳಾಲ

ಎಲ್ಲೆಲ್ಲೂ ಹಿಂಡು ಹಿಂಡು ಬೀದಿ ನಾಯಿಗಳ ಓಡಾಟ. ಸಾಕಷ್ಟು ಅವಡಗಳಿಗೆ ಕಾರಣವಾಗುತ್ತಿರುವ ಬೀದಿ ನಾಯಿಗಳ ಅಬ್ಬರಕ್ಕೆ ಸಾರ್ವಜನಿಕರು ತತ್ತರಿಸಿದ್ದಾರೆ. ಸ್ಥಳೀಯಾಡಳಿತದ ಸಭೆಗಳಲ್ಲಿ ಗದ್ದಲ ನಡೆದರೂ, ಮನವಿ ಕೊಟ್ಟರೂ ಸರ್ಕಾರದ ನಿಯಮದಿಂದ ಯಾವುದೂ ಪ್ರಯೋಜನ ಆಗುತ್ತಿಲ್ಲ!
ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ಆಗುವ ಸಮಸ್ಯೆಗಳು ಒಂದೆರಡಲ್ಲ. ಸಾರ್ವಜನಿಕ ಸ್ಥಳಗಳು, ರಸ್ತೆಗಳು, ಪೊದೆಗಳು ಹೀಗೆ ಎಲ್ಲೆಂದರಲ್ಲಿ ಬೀದಿ ನಾಯಿಗಳದ್ದೇ ದರ್ಬಾರು. ಒಂದೆರಡು ನಾಯಿಗಳಾದರೆ ಜನರನ್ನು ಕಂಡೊಡನೆ ಓಡಿ ಹೋಗುತ್ತದೆ. ಆದರೆ ಹಿಂಡು ಇದ್ದರೆ ಜನರೇ ಓಡಬೇಕಾದ ದುಃಸ್ಥಿತಿ ಉಳ್ಳಾಲ ನಗರಸಭಾ ವ್ಯಾಪ್ತಿಯ ಜನತೆಯದ್ದು.

ಈಗಾಗಲೇ ಶಾಲೆಗೆ ಹೋಗುವ ಮಕ್ಕಳಿಗೆ ಕಡಿದು ಆಸ್ಪತ್ರೆಯ ಹಾದಿ ತೋರಿಸಿರುವ ಬೀದಿ ನಾಯಿಗಳು, ಹಿರಿಯ ನಾಗರಿಕರು, ವಾಹನ ಸವಾರರನ್ನೂ ಕಂಗೆಡಿಸಿದೆ. ಎಲ್ಲೋ ಇರುವ ನಾಯಿಗಳು ಏಕಾಏಕಿ ರಾಜಬೀದಿಗಳಿಗೆ ಓಡಿ ಬಂದು ದ್ವಿಚಕ್ರ ವಾಹನ ಸವಾರರ ಜೀವ ಹಿಂಡುತ್ತಿದೆ. ಶಾಲೆಗಳಿಗೆ ಹೋಗುವ ಮಕ್ಕಳ ಮೇಲೆ ದಾಳಿ ನಡೆಸಿದ ಸಾಕಷ್ಟು ಟನೆಗಳು ನಡೆದಿದೆ. ರಾತ್ರಿಯಿಡೀ ಗುಂಪುಗೂಡಿಕೊಂಡು ಬೊಗಳಿ ಸಾರ್ವಜನಿಕರ ನಿದ್ದೆ ವಾತ್ರವಲ್ಲದೆ ನೆಮ್ಮದಿಗೂ ಕುತ್ತು ತಂದಿದೆ. ಬೀದಿ ನಾಯಿಗಳಿಂದಾಗಿ ಸಾಕು ನಾಯಿಗಳಿಗೂ ಕಂಟಕ ಎದುರಾಗುತ್ತಿದೆ.

ತ್ಯಾಜ್ಯ ರಾಶಿ ಬಳಿ ಅಪಾಯ!

ಈ ತಿಂಗಳಲ್ಲಿ ಬೀದಿನಾಯಿಗಳ ಸಂಖ್ಯೆಯ ಜತೆ ಕಾಟವೂ ಹೆಚ್ಚಾಗಿದೆ. ನಾಯಿಗಳ ಹಿಂಡು ಆಹಾರ ಸಿಗದೆ ಅಲೆದಾಡಿ ಕೊನೆಗೆ ರಸ್ತೆಬದಿ ಮನುಷ್ಯರೇ ಎಸೆದು ಹೋಗುವ ತ್ಯಾಜ್ಯದಲ್ಲಿ ಆಹಾರ ಹುಡುಕುತ್ತದೆ. ತ್ಯಾಜ್ಯದ ನಡುವೆ ಸಿಗುವ ಪ್ಲಾಸ್ಟಿಕ್ ಚೀಲಗಳನ್ನು ಎತ್ತಿಕೊಂಡು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿ ವಾಡಿ ಅಸಹ್ಯಕರ ಸನ್ನಿವೇಷ ಸೃಷ್ಟಿಸುತ್ತದೆ. ಪೊದೆಗಳ ನಡುವೆ ತಣ್ಣನೆ ಕುಳಿತು ಸ್ವಚ್ಛತೆಗೆ ಬರುವವರ ಮೇಲೆ ಏಕಾಏಕಿ ದಾಳಿ ವಾಡುವುದು ಸಾವಾನ್ಯವಾಗಿದೆ.

ತ್ಯಾಜ್ಯ ರಾಶಿ, ಪೊದೆಗಳಲ್ಲಿ ಸಿಗುವ ಕೋಳಿ, ಹಕ್ಕಿಗಳನ್ನು ಹಸಿಯಾಗಿ ತಿಂದು ರಕ್ತದ ರುಚಿ ಸವಿದು ಮನುಷ್ಯರ ಮೇಲೂ ಎರಗಲು ಯತ್ನಿಸುತ್ತಿದೆ. ಇದರ ಪರಿಣಾಮ ಮಕ್ಕಳು, ದಾರಿಹೋಕರ ಮೇಲಾಗುತ್ತಿದೆ. ಮನೆಗಳ ಹೊರಭಾಗದಲ್ಲಿ ಚಪ್ಪಲಿ ಸಹಿತ ಯಾವುದೇ ವಸ್ತುಗಳನ್ನಿಟ್ಟರೂ ರಾತ್ರಿ ಬೆಳಗಾಗುವಾಗ ನಾಪತ್ತೆಯಾಗಿರುತ್ತದೆ. ಹುಡುಕಾಟ ನಡೆಸಿದರೆ ಎಷ್ಟೋ ದೂರದಲ್ಲಿ ಅರೆಬರೆಯಾಗಿ ಕಂಡು ಬರುತ್ತದೆ. ಇಂತಹ ಹಲವಾರು ಟನೆಗಳು ಉಳ್ಳಾಲ ಭಾಗದಲ್ಲಿ ನಡೆಯುತ್ತಿದೆ.

ಸಭೆಗಳಲ್ಲಿ ಗದ್ದಲ

ಬೀದಿ ನಾಯಿಗಳ ಉಪಟಳದಿಂದ ಬೇಸತ್ತ ಜನತೆ ಕ್ರಮಕ್ಕಾಗಿ ಸ್ಥಳೀಯಾಡಳಿತಕ್ಕೆ ನಿರಂತರ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ನಾಯಿಗಳನ್ನು ಯಾವುದೇ ಕಾರಣಕ್ಕೂ ಕೊಲ್ಲುವಂತಿಲ್ಲ. ನಾಯಿಗಳನ್ನು ಹಿಡಿದು ಚುಚ್ಚುಮದ್ದು ನೀಡಿ ಸಂತಾನ ಹರಣ ವಾಡಿ ಹಿಂದಿನ ಜಾಗದಲ್ಲೇ ಬಿಡಬೇಕು ಎನ್ನುವ ನಿಯಮ ಸರ್ಕಾರದ್ದು. ಹೀಗೆ ವಾಡುವುದರಿಂದ ನಾಯಿ ಕಚ್ಚಿದರೂ ಹೆಚ್ಚಿನ ದುಷ್ಪರಿಣಾಮ ಆಗುವುದಿಲ್ಲ ಎನ್ನುವುದು ಅಧಿಕಾರಿಗಳ ವಾದ. ಒಂದು ನಾಯಿಗೆ ಚುಚ್ಚುಮದ್ದು ನೀಡಲು ಒಂದೂವರೆ ಸಾವಿರ ರೂ. ಖರ್ಚಾಗುತ್ತದೆ. ಕೆಲವೊಂದು ಕಡೆಗಳಲ್ಲಿ ಶ್ವಾನ ಪ್ರೇಮಿಗಳು ಬೀದಿ ನಾಯಿಗಳಿಗೆ ತಿಂಡಿ ತಿನಿಸುಗಳನ್ನು ಹಾಕುವುದರಿಂದ ಆಹಾರ ಸಿಗುವ ಆಸೆಯಿಂದ ನಾಯಿಗಳು ಹಿಂಡಾಗಿ ಕಾಯುವುದು ಕೂಡಾ ಸಾರ್ವಜನಿಕರ ಸಮಸ್ಯೆಗೆ ಕಾರಣವಾಗಿದೆ.

ಇದರಿಂದ ಕಂಗೆಟ್ಟಿರುವ ಜನರು ಸ್ಥಳೀಯಾಡಳಿತಕ್ಕೆ ಮನವಿ ನೀಡಿ ಬೇಸತ್ತಿದ್ದಾರೆ. ಗ್ರಾಮಸಭೆಗಳಲ್ಲಿ ಇತರ ವಿಚಾರಗಳಿಗಿಂತಲೂ ಬೀದಿ ನಾಯಿಗಳ ಬಗ್ಗೆಯೇ ವಾತನಾಡಿದ್ದಾರೆ. ಆದರೆ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ತಿಳಿಸಿ ಅಸಹಾಯಕತೆ ವ್ಯಕ್ತಪಡಿಸುವುದು ಸಾವಾನ್ಯ ಎನಿಸಿದೆ.

ಬೀದಿ ನಾಯಿಗಳ ಕಾಟ ಜೋರಾಗಿದ್ದು, ರಾತ್ರಿಯಿಡೀ ಗುಂಪುಗೂಡಿ ಬೊಗಳುವುದರಿಂದ ನಿದ್ದೆಗೂ ತೊಂದರೆ, ದಿನವಿಡೀ ಸಾರ್ವಜನಿಕರು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸ್ಥಳೀಯಾಡಳಿತಕ್ಕೆ ದೂರು ನೀಡಿದರೂ ಜನಪ್ರತಿನಿಧಿಗಳು ನಿರ್ಲಕ್ಷ್ಯದಿಂದ ಪ್ರಯೋಜನ ಆಗುತ್ತಿಲ್ಲ. ಅಬ್ಬಾಸ್ ಉಚ್ಚಿಲ್, ಸಾಮಾಜಿಕ ಕಾರ್ಯಕರ್ತ
ಅಬ್ಬಾಸ್ ಉಚ್ಚಿಲ್, ಸಾಮಾಜಿಕ ಕಾರ್ಯಕರ್ತ
ಉಳ್ಳಾಲ ಪ್ರವಾಸಿ ತಾಣವಾಗಿದ್ದು, ಬೀದಿ ನಾಯಿಗಳ ಹಾವಳಿಯಿಂದ ಪ್ರವಾಸಿಗರು ತೊಂದರೆಗೀಡಾಗುತ್ತಿದ್ದಾರೆ. ಈಗಾಗಲೇ ಶಾಲಾ ಮಕ್ಕಳ ಸಹಿತ ಹಲವರ ಮೇಲೆ ದಾಳಿ ನಡೆಸಿದ್ದು, ಸ್ಥಳೀಯರು ಆತಂಕಕ್ಕೆ ಈಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ನಗರಸಭೆಗೆ ಮನವಿ ವಾಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಝೀರ್ ಬಾರ್ಲಿ, ಉಳ್ಳಾಲ ಯುಟಿ’ಸ್ ಫ್ಯಾನ್ ಕ್ಲಬ್ ಅಧ್ಯಕ್ಷ
ನಝೀರ್ ಬಾರ್ಲಿ, ಉಳ್ಳಾಲ ಯುಟಿ’ಸ್ ಫ್ಯಾನ್ ಕ್ಲಬ್ ಅಧ್ಯಕ್ಷ
ಬೀದಿನಾಯಿಗಳನ್ನು ಕೊಲ್ಲುವಂತಿಲ್ಲ ಎನ್ನುವ ನಿಯಮ ಇದೆ. ಸಂತಾನಹರಣಕ್ಕೆ ಅವಕಾಶವಿದ್ದು, ಈ ವರ್ಷ 30 ನಾಯಿಗಳಿಗೆ ಚುಚ್ಚುಮದ್ದು ನೀಡಲಾಗಿದೆ. ಇಲಾಖೆಯವರು ನಾಯಿಗಳನ್ನು ಹಿಡಿದುಕೊಂಡು ಹೋಗಿ ಚುಚ್ಚುಮದ್ದು ನೀಡಿ ಮತ್ತದೇ ಜಾಗಕ್ಕೆ ಬಿಡುತ್ತಾರೆ. ಕೇಶವ ಪೂಜಾರಿ, ತಲಪಾಡಿ ಗ್ರಾ.ಪಂ. ಪಿಡಿಒ
ಕೇಶವ ಪೂಜಾರಿ, ತಲಪಾಡಿ ಗ್ರಾ.ಪಂ. ಪಿಡಿಒ