ಜಿಲ್ಲೆ

ಅಧಿಕಾರಿಗಳಿಗೆ ಹಾರ, ಪೇಟ, ಶಾಲು ಹೊದಿಸಿ ಸನ್ಮಾನಿಸುವುದನ್ನು ನಿಲ್ಲಿಸಿ: ಬೆಂಗಳೂರು ವಿವಿ ಸೂಚನೆ

Webdesk - Ravikanth

ಬೆಂಗಳೂರು: ತಮ್ಮ ವ್ಯಾಪ್ತಿಯ ವಿವಿಧ ವಿಭಾಗಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳಿಗೆ ಹಾರ, ಪೇಟ, ಶಾಲು ಹೊದಿಸಿ ಸನ್ಮಾನಿಸುವುದು ಮತ್ತು ಉಡುಗೊರೆಗಳನ್ನು ನೀಡುವ ಪರಿಪಾಠವನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಬೆಂಗಳೂರು ವಿಶ್ವವಿದ್ಯಾಲಯವು ಸೂಚನೆ ನೀಡಿದೆ.

ಕಾರ್ಯಕ್ರಮಗಳನ್ನು ಆಯೋಜಿಸುವ ಎಲ್ಲ ವಿಭಾಗ, ಕಚೇರಿ, ಮುಖ್ಯಸ್ಥರು ಸಂಯೋಜಕರು ಸೂಕ್ತ ಗಮನಹರಿಸಿ ವಿಶ್ವವಿದ್ಯಾಲಯದ ಯಾವುದೇ ಕಾರ್ಯಕ್ರಮದಲ್ಲಿಯೂ ಇಂತಹ ಪರಿಹಾಠವನ್ನು ಮುಂದುವರಿಸದಂತೆ ವಿವಿ ಕುಲಸಚಿವರು ಸೂಚನೆ ನೀಡಿದ್ದಾರೆ.

ವಿವಿ ವ್ಯಾಪ್ತಿಯ ವಿವಿಧ ವಿಭಾಗಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಶಾಸನಬದ್ಧ ಅಧಿಕಾರಿಗಳನ್ನು ಆಹ್ವಾನಿಸಿ ಅವರಿಗೆ ಹಾರ, ಪೇಟ, ಶಾಲು ಹೊದಿಸುವುದು ಮತ್ತು ಉಡುಗೊರೆಗಳನ್ನು ನೀಡುವ ಪರಿಪಾಠ ರೂಢಿಸಿಕೊಂಡಿರುವುದನ್ನು ಗಮನಿಸಲಾಗಿದೆ. ಇನ್ನು ಮುಂದೆ ಕಾರ್ಯಕ್ರಮ ಆಯೋಜಿಸುವ ಎಲ್ಲ ವಿಭಾಗ, ಕಚೇರಿ ಮತ್ತು ಮುಖ್ಯಸ್ಥರು ಈ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡಿದ್ದಾರೆ.