ಬೆಳಗಾವಿ: ಜಿಲ್ಲೆಯಲ್ಲಿ ಶಾಸಕರರೊಬರ ಕಚೇರಿಗೆ ನುಗ್ಗಿದ ಕಳ್ಳರು ದಾಖಲೆಗಳನ್ನು ಹೊತ್ತೊಯ್ದಿದ್ದಾರೆ.
ಶನಿವಾರ ತಡರಾತ್ರಿ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರ ಕಚೇರಿ ಬೀಗ ಮುರಿದು ಒಳನುಗ್ಗಿದ ಮುಸುಕುಧಾರಿಗಳು ಅಲ್ಲಿದ್ದ ದಾಖಲೆಗಳನ್ನು ದೋಚಿದ್ದಾರೆ.
ಶಾಸಕರ ಕಚೇರಿಯಲ್ಲಿ ಕಳ್ಳತ ಮಾಡಿದ ಕಳ್ಳರ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾಹಿತಿ ತಿಳಿದ ರಾಮದುರ್ಗ ಪೊಲೀಸರು ಮತ್ತು ಶ್ವಾನ ದಳ ತಂಡ ಸ್ಥಳ ಪರಿಶೀಲಿಸಿದೆ.