ಜಿಲ್ಲೆ

ಸಂಚಾರ ನಿಯಮ ಉಲ್ಲಂಘಿಸುವವರಿಗೆ ಸ್ಪಾಟ್​ ಫೈನ್​ ನಿಲ್ಲಿಸಿಲ್ಲ; ವದಂತಿ ಕುರಿತು ಅಧಿಕಾರಿಗಳ ಸ್ಪಷ್ಟನೆ

Webdesk - Ravikanth

ಬೆಂಗಳೂರು: ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಸ್ಪಾಟ್​ ಫೈನ್​ ಹಾಕುವುದನ್ನು ನಿಲ್ಲಿಸಿಲ್ಲ. ಸ್ಥಳದಲ್ಲೇ ದಂಡ ವಿಧಿಸುವ ಪ್ರಕ್ರಿಯೆ ಎಂದಿನಂತೆಯೇ ಚಾಲ್ತಿಯಲ್ಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ಸವಾರರ ವಿರುದ್ಧ ಸ್ಥಳದಲ್ಲೇ ದಂಡ ವಿಧಿಸುವ ಸಲುವಾಗಿ ನೀಡಲಾಗಿದ್ದ ಪಿಡಿಎ ಮಷಿನ್​ಗಳನ್ನು ಹಿಂಪಡೆಯಲಾಗಿದೆ ಎಂಬ ವದಂತಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಬಿ.ಆರ್. ರವಿಕಾಂತೇಗೌಡ ಸ್ಪಷ್ಟನೆ ನೀಡಿದ್ದಾರೆ.

ನಾವು ಪೊಲೀಸರಿಂದ ಪಿಡಿಎ ಮಷಿನ್ ಹಿಂಪಡೆದಿಲ್ಲ. ಯಥಾ ಪ್ರಕಾರ ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಾತಿ ಇದ್ದೇ ಇರುತ್ತದೆ. ಕೆಲವೆಡೆ ಹರಿದಾಡಿರುವ ಸುದ್ದಿ ಸುಳ್ಳು. ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ಖಚಿತ ಎಂದು ಅವರು ಸ್ಪಷ್ಟಪಡಿಸಿದ್ದಾರೆ.