ಹುಬ್ಬಳ್ಳಿ: ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಹುಬ್ಬಳ್ಳಿಯ ಆರು ಜನರ ತಂಡ ಹಿಮಪಾತಕ್ಕೆ ಸಿಲುಕಿ ಪರದಾಡುವಂತಾಗಿದೆ.
ಸೋನಾ ಮಾರ್ಗದ ಗ್ಲಾಸಿಯರ್ ಹೋಟೆಲ್ ನಲ್ಲಿ ಉಳಿದುಕೊಂಡಿರುವ ಹುಬ್ಬಳ್ಳಿಯ ಪ್ರಕಾಶ ಮೆಹರವಾಡೆ, ಸುಧಾ ಮೆಹರವಾಡೆ ಸೇರಿ ಹಲವರು ಪರದಾಡುವಂತಾಗಿದೆ. ಇವರು ಕಳೆದವಾರ ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದರು.
ಹಿಮಪಾತದಿಂದ ಹೋಟೆಲ್ ನಲ್ಲೇ ಸಿಲುಕಿಕೊಂಡಿರುವವರು ವಿಡಿಯೋ ಮಾಡಿ ಸಹಾಯಕ್ಕೆ ಬೇಡಿಕೊಂಡಿದ್ದಾರೆ. ಸೋನಾ ಮಾರ್ಗ್ ಪ್ರದೇಶದಲ್ಲಿ ತೀವ್ರ ಹಿಮಪಾತವಾಗುತ್ತಿರುವುದರಿಂದ ಸುಮಾರು ಏಳು ಅಡಿಗೂ ಹೆಚ್ಚು ಎತ್ತರದಲ್ಲಿ ಹಿಮ ಸಂಗ್ರಹವಾಗಿದೆ. ಹೀಗಾಗಿ ಹುಬ್ಬಳ್ಳಿಯ ಜನ ಹೋಟೆಲ್ ಹೊರಗಡೆ ಬರಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: 5ನೇ ವಯಸ್ಸಿಗೇ ಲೈಂಗಿಕ ಕಿರುಕುಳ, 9ಕ್ಕೆ ರೇಪ್ಗೆ ಒಳಗಾಗಿದ್ದರಂತೆ ಸಲ್ಮಾನ್ ಖಾನ್ರ ಎಕ್ಸ್ ಗರ್ಲ್ಫ್ರೆಂಡ್!
ಹಿಮಪಾತದಿಂದ ಹೋಟೆಲ್ನಲ್ಲಿ ಸಿಲುಕಿರುವವರಿಗೆ ಹೊಟೆಲ್ ನಲ್ಲೇ ಆಕ್ಸಿಜ್ ಪೂರೈಕೆ ಮಾಡಲಾಗುತ್ತಿದೆ. ಅಲ್ಲದೇ ವಿದ್ಯುತ್ ಕಡಿತ ಮಾಡಲಾಗಿದೆ ಎಂದು ಪ್ರಕಾಶ್ ಮೆಹರವಾಡೆ ವಿಡಿಯೋದಲ್ಲಿ ತಿಳಿಸಿದ್ದಾರೆ.