ಜಿಲ್ಲೆ

ಇವರ ಮನೆ ಹಾಳಾಗಿ ಹೋಗ; ಬಿಜೆಪಿಯನ್ನು ಶಪಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

Webdesk - Manjunatha B

ಜಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಮಧ್ಯೆ ರಾಜಕೀಯ ನಾಯಕರು ಮತಬೇಟೆಯಲ್ಲಿ ತೊಡಗಿದ್ದು ವಿಭಿನ್ನ ತಂತ್ರಗಾರಿಕೆಯನ್ನು ಹೆಣೆಯುತ್ತಿದ್ದಾರೆ.

ಇನ್ನು ದಾವಣಗೆರೆಯ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಂಗ್ರೆಸ್​ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಬ್ಬರದ ಭಾಷಣದ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ರಾಜೇಶ್​ಗೆ ಪಕ್ಷ ನಿಷ್ಠೆ ಇಲ್ಲ

ಕಾಂಗ್ರೆಸ್​ ಅಭ್ಯರ್ಥಿ ದೇವೇಂದ್ರಪ್ಪ ಪರ ಮತಯಾಚಿಸಿದ ಮಾಜಿ ಸಿಎಂಸ ಸಿದ್ದರಾಮಯ್ಯ ಮಾಜಿ ಶಾಸಕ ಎಚ್​.ಪಿ. ರಾಜೇಶ್​ ವಿರುದ್ಧ ಹರಿಹಾಯ್ದಿದ್ದು ತಿರಸ್ಕರಿಸುಂತೆ ಮತದಾರರಲ್ಲಿ ವಿನಂತಿಸಿದ್ದಾರೆ.

ಈ ಬಾರಿ ಕ್ಷೇತ್ರದಲ್ಲಿ ನಿನ್ನ ಬಗ್ಗೆ ಒಲವು ಇಲ್ಲ ಸ್ಪರ್ಧೆ ಬೇಡ ಎಂದಿದ್ದೆ ಟಿಕೆಟ್ ಸಿಕ್ಕಿಲ್ಲ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾನೆ. ಸಿದ್ದರಾಮಯ್ಯ ಸಪೋರ್ಟ್ ಇದೆ ಎಂದು ಸುಳ್ಳು ಹೇಳ್ಕೋಂಡು ತಿರುಗುತ್ತಿದ್ದಾನೆ ನೂರಕ್ಕೆ ನೂರರಷ್ಟು ಅವನಿಗೆ ನನ್ನ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜೇಶ್ ನಮ್ಮ ಪಕ್ಷದಿಂದ ಎರಡು ಬಾರಿ ಸ್ಪರ್ಧಿಸಿದ್ರು 2013 ರಲ್ಲಿ ಗೆದ್ದಿದ್ದರು, 2018 ರಲ್ಲಿ‌ ಸೋತರು. ಎರಡು ದಿನದಲ್ಲಿ ರಾಜೇಶ್​ನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗುತ್ತದೆ. ಆತನನ್ನು ನೀವು ಸಂಪೂರ್ಣವಾಗಿ ತಿರಸ್ಕರಿಸಿ ರಾಜೇಶ್​ಗೆ ಪಕ್ಷ ನಿಷ್ಠೆ ಇಲ್ಲ ಎಂದು ಗುಡುಗಿದ್ದಾರೆ.

ಏನೂ ಅಭಿವೃದ್ಧಿ ಮಾಡಿಲ್ಲ

ಇನ್ನು ಜಗಳೂರು ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ರಾಮಚಂದ್ರ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ಐದು ವರ್ಷಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳನ್ನು ಇಲ್ಲಿನ ಜನಪ್ರತಿನಿಧಿ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ನಮ್ಮ ಪಕ್ಷ ಅಧಿಕಾರಕ್ಕೆ ಬರೋದು ಶತಸಿದ್ಧ ಜನ ಬಿಜೆಪಿನ ಸೋಲಿಸಿ ಕಾಂಗ್ರೆಸ್​ಗೆ ಅಧಿಕಾರ ಕೊಡಬೇಕು ಅಂತ ತೀರ್ಮಾನಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಸ್​ಸಿ-ಎಸ್​ಟಿ ಸಮುದಾಯಕ್ಕೆ ಅನ್ಯಾಯ ಮಾಡಿದೆ

ಇನ್ನು ಮಾತನಾಡುವ ವೇಳೆ ಮಾಜಿ ಸಿಎಂ ಸಿದ್ದರಾಮ್ಯ ಬಿಜೆಪಿ ಎಸ್​ಸಿ ಹಾಗೂ ಎಸ್​ಟಿ ಸಮುದಾಯಕ್ಕೆ ಅನ್ಯಾಯ ಮಾಡಿದೆ. ನಾಗಮೋಹನ್ ದಾಸ್ ಸಮಿತಿ ಮಾಡಿದ್ದು ಕಾಂಗ್ರೆಸ್ ವರದಿ ಕೈ ಸೇರುವ ಸಮಯಕ್ಕೆ ಬಿಜೆಪಿ ಅಪರೇಷನ್ ಕಮಲ‌ ಮಾಡಿ ಅಧಿಕಾರಕ್ಕೆ ಬಂತು.

ವಾಲ್ಮೀಕಿ ಸ್ವಾಮೀಜಿ 200 ಕ್ಕೂ ಹೆಚ್ಚು ದಿನ ಧರಣಿ ಕೂತ ಮೇಲೆ ನಾಗಮೋಹನ್ ದಾಸ್ ವರದಿ ಜಾರಿಗೆ ತಂದ್ರು ಎಸ್​ಸಿ ಎಸ್​ಟಿ ಸಮುದಾಯಕ್ಕೆ ಮೀಸಲಾತಿ ನೀಡಿದ್ದು ರಾಜಕೀಯ ಗಿಮಿಕ್ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರ ನೀಡಿರೋ ಮೀಸಲಾತಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ರೆ ಸ್ಟೇ ಸಿಗತ್ತೆ ಆ ರೀತಿ ಎಸ್​ಸಿ-ಎಸ್​ಟಿ ಸಮುದಾಯಕ್ಕೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಹರಿಹಾಯ್ದಿದ್ದಾರೆ.

ಸುಳ್ಳು ಹೇಳೋರು ಈ ದೇಶದಲ್ಲಿ ಯಾರು ಇಲ್ಲ

ಎಸ್​ಟಿಪಿ-ಟಿಎಸ್​ಪಿ ಕಾಯ್ದೆ ಜಾರಿಗೆ ತಂದಿದ್ದು ನಾವು ಕರ್ನಾಟಕ ಹಾಗೂ ತೆಲಂಗಾಣ ಬಿಟ್ಟರೆ ಬೇರೆ ಯಾವ ರಾಜ್ಯಗಳಲ್ಲಿ ಈ ಕಾನೂನು ಇಲ್ಲ. ನರೇಂದ್ರ ಮೋದಿ ಈ ಕಾನೂನು ಮಾಡಿದ್ದಾರ ಕೇಳಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಮೋದಿಯಷ್ಟು ಸುಳ್ಳು ಹೇಳೋರು ಈ ದೇಶದಲ್ಲಿ ಯಾರು ಇಲ್ಲ ಕಪ್ಪು ಹಣ ತರಲಿಲ್ಲ, 15 ಲಕ್ಷ ಹಾಕಿದ್ರಾ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಯ್ತಾ, ಉದ್ಯೋಗ ಕೊಡಲಿಲ್ಲ, 15 ಪೈಸೆನೂ ಹಾಕಲಿಲ್ಲ.

ಮೋದಿ ನಾ ಕಾವುಂಗ ನಾ ಕಾನೇದೂಂಗ ಅಂತಾರೆ ಆದರೆ ಇಲ್ಲಿ ಬಸವರಾಜ್ ಬೊಮ್ಮಾಯಿ ಸರ್ಕಾರ ಲೂಟಿ ಹೊಡೆದುಕೊಂಡೆ ಇದೆ ಗುತ್ತಿಗೆದಾರರು 40% ಬಗ್ಗೆ ಆರೋಪ ಮಾಡಿದ್ದರು ಇದಕ್ಕೆ ಏನಂತೀರ ಮೋದಿ ಅವರೇ ಎಂದು ಪ್ರಶ್ನಿಸಿದ್ದಾರೆ.

ಇವರ ಮನೆ ಹಾಳಾಗಿ ಹೋಗ

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಲಂಚದ ಹಾವಳಿ ಹೆಚ್ಚಾಗಿದೆ. ಇಂತಹ ಕೆಟ್ಟ ಸರ್ಕಾರವನ್ನು ನೀವು ಎಂದಾದರೂ ನೋಡಿದ್ದೀರ. ನಮ್ಮ ಸರ್ಕಾರ 15 ಲಕ್ಷ ಮನೆ ಕಟ್ಟಿಸಿಕೊಟ್ಟಿದ್ದೇವೆ. ಇವರ ಮನೆ ಹಾಳಾಗಿ ಹೋಗ ಒಂದೇ ಒಂದು ಮನೆನೂ ಕಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾವು ಅಧಿಕಾರಕ್ಕೆ ಬಂದ್ರೆ 20 ಲಕ್ಷ ಮನೆ ಕಟ್ಟಿಸಿ ಕೊಡುತ್ತೇವೆ ಆನ್ ಲೈನ್ ಅರ್ಜಿ ಹಾಕಿದ್ರೆ ಕೂಡಲೇ ಮಂಜೂರು ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.

ನಾವು ನುಡಿದಂತೆ ನಡೆಯುತ್ತೇವೆ ಸಿದ್ದರಾಮಯ್ಯ ಬಸವರಾಜ್ ಬೊಮ್ಮಾಯಿ, ನರೇಂದ್ರ ಮೋದಿ ಅಲ್ಲ. ಕೊಟ್ಡ ಮಾತಿನಂತೆ ನಡೆದುಕೊಳ್ಳುವವರು ನಾವು ಎಂದು ಜಗಳೂರಿನಲ್ಲಿ ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.