ಹಂಗಾರಕಟ್ಟೆ ಬಾಳ್ಕುದ್ರು ನಾರಾಯಣಗುರು ಬಿಲ್ಲವ ಸಂಘ ಮಹಿಳಾ ಘಟಕ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ವಿವಿಧ ಧಾರ್ಮಿಕ ವಿಧಿವಿಧಾನ ಜರುಗಿತು 
ಜಿಲ್ಲೆ

ಹಂಗಾರಕಟ್ಟೆ ಬಾಳ್ಕುದ್ರು ಶ್ರೀ ವರಮಹಾಲಕ್ಷ್ಮೀ ಪೂಜೆ

ಇಂದಿರಾ ಎನ್ ಕೆ

ಕೋಟ: ನಾರಾಯಣಗುರು ಬಿಲ್ಲವ ಸಂಘ ಬಾಳ್ಕುದ್ರು ಹಂಗಾರಕಟ್ಟೆ ಮಹಿಳಾ ಘಟಕ ವತಿಯಿಂದ 11ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜಾ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನ ಜರುಗಿತು.

ಬಿರ್ತಿ ಸೂರಿ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಮಹಿಳಾ ಘಟಕದ ಮಹಿಳೆಯರಿಂದ ಭಜನಾ ಕಾರ್ಯಕ್ರಮ, ಪೂಜೆ ಅರ್ಚನೆ ಮಹಾಮಂಗಳಾರತಿ, ಅನ್ನ ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು.

ಬಿಲ್ಲವ ಮಹಿಳಾ ಘಟಕ ಅಧ್ಯಕ್ಷ ಶಕುಂತಲಾ ವಾಸುದೇವ ಕೋಟ್ಯಾನ್, ಸಂಘದ ಮಹಿಳಾ ಸಂಘ ಸದಸ್ಯರು, ಬಿಲ್ಲವ ಸಂಘ ಗೌರವಾಧ್ಯಕ್ಷ ನಾರಾಯಣ ಪೂಜಾರಿ, ಅಧ್ಯಕ್ಷ ವಿಜಯ್ ಪೂಜಾರಿ, ಸದಸ್ಯರಾದ ರವೀಂದ್ರ ಸುವರ್ಣ, ಆನಂದ ಪೂಜಾರಿ, ಸುಭಾಸ್ ಪೂಜಾರಿ, ಸತೀಶ್ ಪೂಜಾರಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.