ಜಿಲ್ಲೆ

ಸಲಿಂಗ ಕಿರುಕುಳ, ಇಬ್ಬರ ಸೆರೆ

ಸೌಮ್ಯ ಆರ್

ಕಾಸರಗೋಡು: ಇಬ್ಬರು ಬಾಲಕರನ್ನು ವಸತಿಗೃಹಕ್ಕೆ ಕರೆದೊಯ್ದು ಸಲಿಂಗ ಕಿರುಕುಳ ನೀಡಿರುವ ಬಗ್ಗೆ ಆದೂರು ಠಾಣೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಯೂಸುಫ್ ಮದಕ್ಕ ಹಾಗೂ ಜುನೈದ್ ಎಂಬುವರನ್ನು ಬಂಧಿಸಲಾಗಿದೆ.ತನ್ನನ್ನು ಹನಿಟ್ರಾೃಪ್ ಮಾಡಿ 50ಸಾವಿರ ರೂ. ಎಗರಿಸಿರುವುದಾಗಿ ಯೂಸುಫ್ ಆರೋಪಿಸಿದ್ದಾನೆ. ಬಸ್ಸಿನಲ್ಲಿ ಪರಿಚಯಗೊಂಡಿದ್ದ ಹದಿನೇಳರ ಬಾಲಕನನ್ನು ಎಂಡಿಎಂಎ ನೀಡುವುದಾಗಿ ಮುಳ್ಳೇರಿಯಕ್ಕೆ ಕರೆಸಿಕೊಂಡು, ಅಲ್ಲಿಂದ ಕಾರಿನಲ್ಲಿ ವಿವಿಧೆಡೆ ಕರೆದೊಯ್ದು ನಂತರ ಕಾಸರಗೋಡಿನ ವಸತಿಗೃಹದಲ್ಲಿ ಕೊಠಡಿ ಪಡೆದು ಕಿರುಕುಳ ನೀಡಿದ್ದನು. ಈ ಮಧ್ಯೆ ಇನ್ನೊಬ್ಬ ಬಾಲಕನನ್ನೂ ಕೊಠಡಿಗೆ ಕರೆಸಿ, ಕಿರುಕುಳ ನೀಡಿದ್ದಾನೆ. ಈ ದೃಶ್ಯಗಳನ್ನು ಜುನೈದ್ ಮೊಬೈಲಲ್ಲಿ ಚಿತ್ರೀಕರಿಸಿಕೊಂಡಿದ್ದನು.