ಧರ್ಮ ರಕ್ಷಣೆ ನಮ್ಮ ಹೊಣೆ: ಉಮೇಶ್ ಪಂಜ ಹೇಳಿಕೆ

hindu
ಕಾರ್ನಾಡು ಹರಿಹರ ಕ್ಷೇತ್ರದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ನಡೆಯಿತು. ಮೂಲ್ಕಿ ಬಂಟರ ಸಂಘ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ತಾಲೂಕು ವಿಹಿಂಪ ಅಧ್ಯಕ್ಷ ಕೆ.ವಿ.ಶೆಟ್ಟಿ, ಜಿಲ್ಲಾ ಬಜರಂಗದಳದ ಪ್ರೀತಮ್ ಶೆಟ್ಟಿ, ಗೋರಕ್ಷಾ ಪ್ರಮುಖ್ ರಾಜೇಶ್ ಎಸ್ಕೋಡಿ ಉಪಸ್ಥಿತರಿದ್ದರು.
Published on

ಮೂಲ್ಕಿ: ದೇಶದ ಅಖಂಡತೆ, ಧರ್ಮ ರಕ್ಷಣೆ ನಮ್ಮ ಹೊಣೆಯಾಗಿದ್ದು ಯುವ ಸಮಾಜಕ್ಕೆ ದಾರ್ಮಿಕ ಶಿಕ್ಷಣದೊಂದಿಗೆ ಸಂಘಟನಾತ್ಮಕವಾಗಿ ಬಲ ನೀಡುವ ಕಾರ್ಯ ನಡೆಯಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಉಮೇಶ್ ಪಂಜ ಹೇಳಿದರು.

ವಿಶ್ವಹಿಂದು ಪರಿಷತ್, ಬಜರಂಗದಳ ಮೂಲ್ಕಿ ಪ್ರಖಂಡ ವತಿಯಿಂದ ಕಾರ್ನಾಡು ಹರಿಹರ ಕ್ಷೇತ್ರದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆಯಲ್ಲಿ ಮಾತನಾಡಿದರು.

ಮೂಲ್ಕಿ ಬಂಟರ ಸಂಘ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ತಾಲೂಕು ವಿಹಿಂಪ ಅಧ್ಯಕ್ಷ ಕೆ.ವಿ.ಶೆಟ್ಟಿ, ಜಿಲ್ಲಾ ಬಜರಂಗದಳದ ಪ್ರೀತಮ್ ಶೆಟ್ಟಿ, ಗೋರಕ್ಷಾ ಪ್ರಮುಖ್ ರಾಜೇಶ್ ಎಸ್ಕೋಡಿ ಉಪಸ್ಥಿತರಿದ್ದರು.

ಬಜರಂಗದಳ ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ ದಿಕ್ಸೂಚಿ ಭಾಷಣ ಮಾಡಿದರು. ವಿಎಚ್‌ಪಿ ಸಹ ಕಾರ್ಯದರ್ಶಿ ಅಶೋಕ್ ಕೆಮ್ಮಡೆ ಸ್ವಾಗತಿಸಿ. ಉಮೇಶ್ ಪಂಜ ಪ್ರಸ್ತಾವಿಸಿದರು. ಶಾಮ ಸುಂದರ್ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net