ಜಿಲ್ಲೆ

ವಿವೇಕ ಪ್ರೌಢಶಾಲಾ ವಿಭಾಗದ ಮುಖ್ಯಸ್ಥರ ಆಯ್ಕೆ

ಕೋಟ: ಇಲ್ಲಿನ ವಿವೇಕ ಬಾಲಕಿಯರ ಪ್ರೌಢಶಾಲೆ ಮುಖ್ಯಸ್ಥರಾಗಿ ವೆಂಕಟೇಶ್ ಉಡುಪ ಹಾಗೂ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಮುಖ್ಯಸ್ಥರಾಗಿ ಪ್ರೇವಾನಂದ ಬಾರ್ಕೂರು ಇವರನ್ನು ಕೋಟ ವಿದ್ಯಾಸಂ ಆಡಳಿತ ಮಂಡಳಿ ನೇಮಿಸಿದೆ.

ನೂತನ ಮುಖ್ಯಸ್ಥರಿಗೆ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿತು. ಆಡಳಿತ ಮಂಡಳಿ ಅಧ್ಯಕ್ಷ ಪಿ.ಪ್ರಭಾಕರ ಮಯ್ಯ, ವಿದ್ಯಾಸಂ ಕಾರ್ಯದರ್ಶಿ ರಾಮದೇವ ಐತಾಳ್, ಜತೆ ಕಾರ್ಯದರ್ಶಿಗಳಾದ ಮಂಜುನಾಥ ಉಪಾಧ್ಯ, ವಸಂತ ಶೆಟ್ಟಿ, ಪ್ರಾಂಶುಪಾಲ ಜಗದೀಶ ನಾವಡ, ನಿವೃತ್ತ ಮುಖ್ಯ ಶಿಕ್ಷಕರಾದ ಜಗದೀಶ ಹೊಳ್ಳ, ಶಿಕ್ಷಕ ಸಂ ಸಿಬ್ಬಂದಿ, ಕಾರ್ಯದರ್ಶಿ ಎಚ್.ಎಸ್.ಚಂದ್ರಶೇಖರ ಮೊದಲಾದವರು ಉಪಸ್ಥಿತರಿದ್ದರು.