ಬೆಳ್ತಂಗಡಿ: ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 5 ವರ್ಷಗಳ ಅವಧಿಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷರಾಗಿ ಅಶೋಕ ಪಿ.ಪಾಂಜಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಡೀಕಯ್ಯ ಗೌಡ, ನಾರಾಯಣ ಗೌಡ, ಉದಯ ಭಟ್, ರುಕ್ಮಯ್ಯ ಗೌಡ ಯಾನೆ ಪ್ರಭಾಕರ ಗೌಡ, ಪ್ರಸಾದ್ ಎ., ಉದಯ ಬಿ.ಕೆ, ಶೀಲಾವತಿ, ಶಾರದಾ ಆರ್.ರೈ, ಚಂದನ್ ಕುಮಾರ್ ಎ., ದಿನೇಶ್ ನಾಯ್ಕ ಸಹಕಾರ ಭಾರತಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿ ಪ್ರತಿಮಾ ನೆರವೇರಿಸಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಚುನಾವಣಾ ಉಸ್ತುವಾರಿ ಪ್ರಮುಖ್ ಬಾಲಕೃಷ್ಣ ಗೌಡ ಬಿರ್ಮೋಟ್ಟು, ಕಣಿಯೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಬಾಲಕೃಷ್ಣ ಗೌಡ ಮುಗೇರಡ್ಕ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೇಕ್ಯಾರು, ಬಂದಾರು ಶಕ್ತಿ ಕೇಂದ್ರ ಪ್ರಮುಖ್, ಬಂದಾರು ಪಂಚಾಯಿತಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಕಣಿಯೂರು ಪಂಚಾಯಿತಿ ಅಧ್ಯಕ್ಷ ಸೀತಾರಾಮ, ಕಣಿಯೂರು ಶಕ್ತಿ ಕೇಂದ್ರ ಪ್ರಮುಖ್ ವಕೀಲ ಯತೀಶ್ ಪಣೆಕ್ಕರ, ಮೊಗ್ರು ಕೇಂದ್ರ ಪ್ರಮುಖ್ ಗಂಗಾಧರ ಪೂಜಾರಿ, ಮಂಡಲ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ, ಬಂದಾರು, ಮೊಗ್ರು, ಕಣಿಯೂರು ಜನಪ್ರತಿನಿಧಿಗಳು, ಬೂತ್ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.