ಉಪ್ಪಳ: ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರು ಸಂಸ್ಥೆಯ ಉಪ್ಪಳ ಟಕದ ನೂತನ ಅಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಆಯ್ಕೆಯಾದರು.
ಇತ್ತೀಚೆಗೆ ಶ್ರೀಹರಿ ಭಜನಾ ಸಂ ಕುಳೂರು ಸಂದ ವಠಾರದಲ್ಲಿ ಜರಗಿದ ಉಪ್ಪಳ ಟಕದ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪ್ಪಳ ಟಕದ ಗೌರವಾಧ್ಯಕ್ಷ ಪಿ.ಆರ್.ಶೆಟ್ಟಿ ಪೊಯ್ಯೆಲು ಕುಳೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಗೌರವ ವಾರ್ಗದರ್ಶಕರಾಗಿರುವ ಸಮಿತಿಯಲ್ಲಿ ಮುಂದಿನ ಸಾಲಿಗೆ ಉಪ್ಪಳ ಟಕದ ಗೌರವಾಧ್ಯಕ್ಷರಾಗಿ ಪಿ.ಆರ್.ಶೆಟ್ಟಿ ಪೊಯ್ಯೆಲು ಕುಳೂರು, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ ಶೆಟ್ಟಿ ಕಳಾಯಿ, ಸಂಚಾಲಕರಾಗಿ ಯೋಗೀಶ ರಾವ್ ಚಿಗುರುಪಾದೆ, ಕೋಶಾಧಿಕಾರಿಯಾಗಿ ಶಶಿಧರ ಪೂಂಜ ಕೊಂಡೆವೂರು ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.