ಬಂಟ್ವಾಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಆರೋಗ್ಯ ಮತ್ತು ಕ್ಷೇಮ ಉಪಕೇಂದ್ರ ವೀರಕಂಭ, ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ಸಭೆ ವೀರಕಂಭ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಜರುಗಿತು.
ಗ್ರಾಮ ಸಮುದಾಯ ಆರೋಗ್ಯ ಅಧಿಕಾರಿ ಹರ್ಷಿತ ಕ್ಷಯ ರೋಗ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಮಿತಿಯ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ನಿರ್ಣಯಿಸಲಾಯಿತು. ಗ್ರಾಪಂ ಅಧ್ಯಕ್ಷ ಲಲಿತಾ, ಉಪಾಧ್ಯಕ್ಷ ಜನಾರ್ದನ ಪೂಜಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಷ್ಪ, ಪಂಚಾಯಿತಿ ಕಾರ್ಯದರ್ಶಿ ಸವಿತಾ ಉಪಸ್ಥಿತರಿದ್ದರು.
ವೀರಕಂಬ ಗ್ರಾಪಂ ಸದಸ್ಯರಾದ ರಘು ಪೂಜಾರಿ, ಶೀಲಾ ನಿರ್ಮಲ ವೇಗಸ್, ಜಯಂತಿ, ಗೀತ ಗಾಂಭೀರ್, ದಿನೇಶ್ ಪೂಜಾರಿ, ಜಯಪ್ರಸಾದ್, ಅಬ್ದುಲ್ ರಹೀಮಾನ್, ವೀರಕಂಬ ಗ್ರಾಮ ವ್ಯಾಪ್ತಿಯ ಆರೋಗ್ಯ ಸುರಕ್ಷಣಾಧಿಕಾರಿ ಜ್ಯೋತಿ ಕೆ. ಎನ್., ಆಶಾ ಸುಗಮಕಾರರಾದ ಶೋಭಾ, ಆಶಾ ಕಾರ್ಯಕರ್ತೆ ಸ್ನೇಹಲತ ಶೆಟ್ಟಿ, ಶಶಿಕಲಾ ಮೊದಲಾದವರು ಭಾಗವಹಿಸಿದ್ದರು.